Home » Ankush Bahuguna: 40 ಗಂಟೆಗಳ ಕಾಲ ಖ್ಯಾತ ಯೂಟ್ಯೂಬರ್ ಅಂಕುಶ್ ಬಹುಗುಣ ಡಿಜಿಟಲ್ ಬಂಧನ

Ankush Bahuguna: 40 ಗಂಟೆಗಳ ಕಾಲ ಖ್ಯಾತ ಯೂಟ್ಯೂಬರ್ ಅಂಕುಶ್ ಬಹುಗುಣ ಡಿಜಿಟಲ್ ಬಂಧನ

0 comments

Ankush Bahuguna: ಯೂಟ್ಯೂಬರ್ ಅಂಕುಶ್ ಬಹುಗುಣ ಅವರು ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಆಗಿದ್ದು, 40 ಗಂಟೆಗಳ ಕಾಲ ಡಿಜಿಟಲ್ ಬಂಧನದಲ್ಲಿದ್ದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ತಿಳಿಸಿದ್ದಾರೆ. ದುಷ್ಕರ್ಮಿಗಳು ತನ್ನನ್ನು ಹೇಗೆ ಬಲೆಗೆ ಕೆಡವಿದರು ಎಂದು ಬಹುಗುಣ ಹೇಳಿದ್ದಾರೆ.

ಡಿಜಿಟಲ್ ಬಂಧನಕ್ಕೆ ಒಳಗಾದ ನಂತರ, ನಾನು ನನ್ನ ಹಣ ಕಳೆದುಕೊಂಡಿದ್ದು, ಜೊತೆಗೆ ಮಾನಸಿಕ ಆಘಾತಕ್ಕೊಳಗಾಗಿದ್ದೀನಿ. ನನಗೆ ಇದು ಸಂಭವಿಸಿದೆ ಎಂದರೆ ನನಗೆ ನಂಬಲಾಗುತ್ತಿಲ್ಲ ಎಂದು ಯೂಟ್ಯೂಬರ್ ಹೇಳಿದ್ದಾರೆ.

ನನಗೆ ಅಂತರಾಷ್ಟ್ರೀಯ ಸಂಖ್ಯೆಯಿಂದ ಕರೆ ಬಂದಿದ್ದು, ನಾನು ಕಾಲ್ ರಿಸೀವ್‌ ಮಾಡಿದೆ. ಒಂದು ಕೊರಿಯರ್ ಅನ್ನು ಕಳುಹಿಸಲಾಗಿದ್ದು, ಅದರಲ್ಲಿ ಡ್ರಗ್ಸ್‌ ಇರುವುದು ಪತ್ತೆಯಾಗಿದೆ. ಕಸ್ಟಮ್ಸ್ ಇಲಾಖೆ ಅದನ್ನು ವಶಪಡಿಸಿಕೊಂಡಿದೆ ಎಂದು ಕರೆ ಮಾಡಿದವರು ಹೇಳಿದರು. ಇದರಿಂದ ನನಗೆ ಭಯವಾಯಿತು. ನಂತರ ನನ್ನ ಆಧಾರ್ ಕಾರ್ಡ್ ಇತ್ಯಾದಿಗಳ ಬಗ್ಗೆ ಮಾಹಿತಿ ಕೇಳಿ ಡಿಜಿಟಲ್ ಮೂಲಕ ಬಂಧಿಸಿದ್ದಾರೆ.

ಇವರು ನನ್ನ ವಿರುದ್ಧ ಅಕ್ರಮ ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಮುಂತಾದ ಗಂಭೀರ ಆರೋಪಗಳನ್ನು ಮಾಡಿದ್ದು,
ದೊಡ್ಡ ಪ್ರಕರಣದಲ್ಲಿ ನಾನು ಪ್ರಮುಖ ಆರೋಪಿ ಎಂದು ಯೂಟ್ಯೂಬರ್ ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋಗಲು ನನಗೆ ಸಮಯವಿಲ್ಲ ಎಂದು ಹೇಳಿದಾಗ ಪುಂಡರು ನನ್ನ ಕರೆಯನ್ನು ಠಾಣೆಗೆ ಸಂಪರ್ಕಿಸಬಹುದು ಎಂದು ಹೇಳಿದರು. 40 ಗಂಟೆಗಳ ಕಾಲ ನಿರಂತರವಾಗಿ ವೀಡಿಯೊ ಕರೆಯಲ್ಲಿ ನನ್ನು ಇರಿಸಲಾಗಿದ್ದು, ದುರುಳರು ಹಣ ವರ್ಗಾವಣೆ ಮಾಡಲು ಬ್ಯಾಂಕ್ ಗೆ ಕಳುಹಿಸಿದ್ದು, ಬ್ಯಾಂಕ್ ಮುಚ್ಚಿದ್ದರಿಂದ ಹಣ ವರ್ಗಾವಣೆ ಸಾಧ್ಯವಾಗಿಲ್ಲ.

ಡಿಜಿಟಲ್‌ ಅರೆಸ್ಟ್‌ ಎಂದರೇನು?
ಡಿಜಿಟಲ್ ಬಂಧನದಲ್ಲಿ, ವಂಚಕರು ನಕಲಿ ಪೋಲೀಸ್ ಅಥವಾ ತನಿಖಾ ಅಧಿಕಾರಿಗಳಂತೆ ಕರೆ ಮಾಡುತ್ತಾರೆ. ಬಂಧನದ ಭಯವನ್ನು ತೋರಿಸುವ ಮೂಲಕ, ವ್ಯಕ್ತಿಯನ್ನು ಮನೆಯಲ್ಲಿಯೇ ಬಂಧನ ಮಾಡುವ ಮೂಲಕ, 24 ಗಂಟೆಗಳ ಕಾಲ ಕ್ಯಾಮೆರಾದ ಮುಂದೆ ಇರುವಂತೆ ಕೇಳಲಾಗುತ್ತದೆ. ಯಾರನ್ನೂ ಸಂಪರ್ಕಿಸಲು ಅವರಿಗೆ ಅವಕಾಶ ನೀಡಲಾಗುವುದಿಲ್ಲ. ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ.

You may also like