Kumbh Mela: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳಕ್ಕೆ (Kumbh Mela) ಉತ್ತರ ಪ್ರದೇಶ ಸಜ್ಜಾಗಿದೆ. ಮದುವಣಗಿತ್ತಿಯಂತೆ ಇಡೀ ರಾಜ್ಯ ಸಿಂಗಾರಗೊಂಡಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು-ಸಂತರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಕುಂಭಮೇಳಕ್ಕಾಗಿ ಸಿದ್ಧತೆ ನಡೆಯುತ್ತಿರುವ ಆ ಭೂಮಿ ವಕ್ಫ್ ಬೋರ್ಡ್ ನದ್ದಾಗಿದೆಯಂತೆ!!
ಹೌದು, ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದಿನ ಹಿಂದೂ ದೇವಸ್ಥಾನ, ರೈತರ ಜಮೀನು, ಸರ್ಕಾರಿ ಶಾಲೆ ಸೇರಿದಂತೆ ಹಲವು ಸ್ಥಳಗಳನ್ನು ವಕ್ಫ್ ಸಮಿತಿ ತನ್ನದು ಎಂದು ನೋಟಿಸ್ ನೀಡಿ ಈಗಾಗಲೇ ವಿವಾದ ಸೃಷ್ಟಿಸಿದೆ. ಇನ್ನು ಲಕ್ಷ ಲಕ್ಷ ಏಕರೆ ಸ್ಥಳವನ್ನು ಈಗಾಗಲೇ ವಕ್ಫ್ ತನ್ನ ಹೆಸರಿಗೆ ಮಾಡಿಕೊಡಿದೆ. ಈ ಬೆನ್ನಲ್ಲೇ ಈ ಎಲ್ಲ ವಿವಾದಗಳಿಗೆ ತುಪ್ಪ ಸುರಿಯುವಂತಹ ಮತ್ತೊಂದು ಘಟನೆ ಮುನ್ನಲೆಗೆ ಬಂದಿದೆ. ಅದುವೆ ಮಹಾ ಕುಂಭಮೇಳ ನಡೆಯುತ್ತಿರುವ ಜಾಗವು ಕೂಡ ವಕ್ಫ್ ಬೋರ್ಡಿಗೆ ಸೇರಿದೆ ಎನ್ನುವುದು.
ಯಸ್, ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಅಧ್ಯಕ್ಷ ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ಫೋಟಕ ಹೇಳಿಕೆ ನೀಡಿದ್ದು ಪ್ರತಿ ವರ್ಷ ನಡೆಯುತ್ತಿರುವ ಮಹಾಕುಂಭ ಮೇಳೆ ಸ್ಥಳ ವಕ್ಪ್ ಆಸ್ತಿಗೆ ಸೇರಿದೆ ಎಂದಿದ್ದಾರೆ. ಅಲ್ಲದೆ ಈ ಕುರಿತು ‘ಮುಸಲ್ಮಾನರು ದೊಡ್ಡ ಮನಸ್ಸಿನಿಂದ ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿಲ್ಲ. ಬಾಬಾ ಜನರು (ಹಿಂದುಗಳ ಸಾಧು ಸಂತರು) ಮುಸಲ್ಮಾನರ ವಿರುದ್ಧವಾಗಿದ್ದಾರೆ. ಇಂತಹ ಸಂಕುಚಿತ ದೃಷ್ಟಿಕೋನ ಬಿಡಬೇಕಾಗುವುದು. ಮುಸಲ್ಮಾನರು ದೊಡ್ಡ ಧೈರ್ಯ ತೋರಿದ್ದಾರೆ ಮತ್ತು ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಕುರಿತು ಸಾಧು ಸಂತರು ಯೋಚಿಸಬೇಕು, ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಝವಿ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
