Home » Vitla: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ದರೋಡೆ; ಮಹತ್ವದ ಸುಳಿವು ಲಭ್ಯ

Vitla: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ದರೋಡೆ; ಮಹತ್ವದ ಸುಳಿವು ಲಭ್ಯ

0 comments
Crime

Vitla: ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್‌ ಹಾಜಿ ಮನೆಯಲ್ಲಿ ಇಡಿ ಅಧಿಕಾರಿಗಳ ತಂಡದ ಸೋಗಿನಲ್ಲಿ ಬಂದ ತಂಡವೊಂದು ದರೋಡೆ ಮಾಡಿ, ಮನೆ ಮಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಹೋದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್‌ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ.

ಸಿಸಿಟಿವಿ ಅಳವಡಿಕೆ ಮನೆಯ ಸುತ್ತ ಮುತ್ತ ಅಳವಡಿಸದೇ ಇರುವುದು ತನಿಖೆಯ ಹಿನ್ನೆಡೆಗೆ ಕಾರಣವಾಗಿದೆ. ಪೊಲೀಸರ ನಾಲ್ಕು ತಂಡ ಈ ರಚಿಸಲಾಗಿದ್ದು ತನಿಖೆ ಚುರುಕಾಗಿದೆ. ವಿವಿಧ ಠಾಣೆಯಲ್ಲಿರುವ ನುರಿತ ಪೊಲೀಸ್‌ ಸಿಬ್ಬಂದಿಗಳ ತಂಡಗಳನ್ನು ಈ ಪ್ರಕರಣದಲ್ಲಿ ನಿಯೋಜಿಸಲಾಗಿದೆ. ಬೇರೆ ಬೇರೆ ಆಯಾಮದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ಸುಲೈಮಾನ ಹಾಜಿಯವರ ಆಪ್ತ ವಲಯದವರೇ ಈ ಕೃತ್ಯ ಮಾಡಿದ್ದಾರೆಯೇ? ಎನ್ನುವ ಅನುಮಾನ ತನಿಖಾ ತಂಡಕ್ಕೆ ಬಂದಿದೆ. ಆ ಮನೆಯಲ್ಲಿ ನಗದಿನ ಪ್ರಮಾಣದ ತಿಳಿದಿರುವ ವ್ಯಕ್ತಿಗಳೇ ದರೋಡೆಯ ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ನಮೂದು ಮಾಡಲಾಗಿರುವ ಹಣಕ್ಕಿಂತ ಹೆಚ್ಚಿನ ಹಣ ಆ ಮನೆಯಲ್ಲಿ ಇದ್ದಿರಬಹುದು ಎನ್ನಲಾಗಿದ್ದು, ಇದನ್ನು ತಿಳಿದು ಉದ್ಯಮಿಯನ್ನು ಹನಿಟ್ರ್ಯಾಪ್‌ ಮಾಡಲಾಗಿದೆಯೇ ಎನ್ನುವ ಸಂಶಯ ಬಂದಿದೆ.

ಸರಿಸುಮಾರು ಬರೋಬ್ಬರಿ 80 ಎಕರೆ ಅಡಿಕೆ ತೋಟ ಇರುವ ಉದ್ಯಮಿಯ ಮನೆಯಲ್ಲಿ 25 ರಿಂದ 30 ಲಕ್ಷ ರೂಪಾಯಿ ಕ್ಯಾಶ್‌ ಇದ್ದಿದ್ದರೆ ಇಡಿ ಅಧಿಕಾರಿಗಳಿಗೆ ಭಯ ಬಿದ್ದು ಬೀಳುವ ಅವಶ್ಯಕತೆ ಇದೆಯೇ ಎನ್ನುವುದು ಸ್ಥಳೀಯರ ಮಾತು.

ದರೋಡೆಗೆ ಬಂದ ತಂಡಕ್ಕೆ ಈ ಮನೆ, ಉದ್ಯಮಿಯ ಕುರಿತು ಸಂಪತ್ತಿನ ಕುರಿತು ಸಂಪೂರ್ಣ ಮಾಹಿತಿ ಇರುವ ವ್ಯಕ್ತಿ ಸಹಕಾರ ನೀಡಿರುವ ಕುರಿತು ಪೊಲೀಸರ ಅನುಮಾನ. ಎಲ್ಲಾ ಆಯಾಮದಲ್ಲಿ ಪೊಲೀಸರ ತನಿಖೆ ನಡೆಯುತ್ತಿದ್ದು, ಅಂತರಾಜ್ಯ ಕ್ರಿಮಿನಲ್‌ಗಳ ಸಹಕಾರದಿಂದ ಈ ದರೋಡೆ ನಡೆದಿರಬಹುದು ಎನ್ನಲಾಗಿದೆ.

ಸುಲೈಮಾನ ಹಾಜಿಯವರ ಆಪ್ತ ವಲಯದವರ ಫೋನ್‌, ಚಲನವಲನಗಳ ಕುರಿತು ತನಿಖಾ ತಂಡ ನಿಗಾ ಇರಿಸಿದೆ. ಮಹತ್ವ ಸುಳಿವು ದೊರಕಿದೆ ಎನ್ನುವುದರ ಕುರಿತು ವರದಿಯಾಗಿದೆ.

You may also like