Home » Shringeri: 6 ಮಂದಿ ನಕ್ಸಲರ ಶರಣಾಗತಿಯಾಗಲು ಪ್ರಮುಖ ಕಾರಣವೇ ಈ ಗೌರಮ್ಮ!! ಯಾರು ಈ ಮಹಿಳೆ

Shringeri: 6 ಮಂದಿ ನಕ್ಸಲರ ಶರಣಾಗತಿಯಾಗಲು ಪ್ರಮುಖ ಕಾರಣವೇ ಈ ಗೌರಮ್ಮ!! ಯಾರು ಈ ಮಹಿಳೆ

0 comments

Shringeri: ಕರ್ನಾಟಕದ ಇತಿಹಾಸದಲ್ಲೇ ಮೊದಲೆಂಬಂತೆ ಇತ್ತೀಚಿಗೆ ಆರು ಜನ ನಕ್ಸಲೆಟ್ ಗಳು ತಮ್ಮೆಲ್ಲ ಕೃತ್ಯಗಳನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗತಿಯಾಗಿ ಬಂಧನಕೊಳಗಾಗಿದ್ದಾರೆ. ಆದರೆ ಈ ನಕ್ಸಲರು ಶರಣಾಗತಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಗೌರಮ್ಮನವರು.

ಹೌದು, ನಕ್ಸಲರ ಈ ಶರಣಾಗತಿಯಲ್ಲಿ ಶೃಂಗೇರಿ(Shringeri) ತಾಲ್ಲೂಕಿನ ಕಿಗ್ಗಾ ಬಳಿಯ ಕಿತ್ತಲೆಗುಳಿಯ ಬುಡಕಟ್ಟು ಮಹಿಳೆ ಗೌರಮ್ಮ ಅವರ ಪಾತ್ರ ಪ್ರಮುಖವಾಗಿತ್ತು. ಗೋಪಾಲಕಿಯಾಗಿರುವ ಗೌರಮ್ಮ ಅವರು, ಸರ್ಕಾರ ಮತ್ತು ನಕ್ಸಲರ ನಡುವೆ ಸಂದೇಶವಾಹಕಿಯಾಗಿ ಕೆಲಸ ಮಾಡಿದ್ದರು.

ಗೌರಮ್ಮ ಅವರು ಹಸುಗಳಿಗೆ ಮೇಯಿಸಲು ಕಾಡಿಗೆ ಹೋಗಿ, ಅಲ್ಲಿ ನಕ್ಸಲರ ಭೇಟಿ ಮಾಡಿ, ಅವರು ನೀಡಿದ ಸಂದೇಶವನ್ನು ಸರ್ಕಾರಕ್ಕೆ ರವಾನಿಸುತ್ತಿದ್ದರು. ಗೌರಮ್ಮ ಅವರಿಗೆ ಶರಣಾದ ನಕ್ಸಲರ ಅಡಗುತಾಣಗಳು ತಿಳಿದಿತ್ತು. ಹೀಗಾಗಿ ಅವರೊಂದಿಗೆ ಸಂವಹನ ಸಾಧಿಸುತ್ತಿದ್ದರು. ನಕ್ಸಲರು ಕೂಡ ಗೌರಮ್ಮ ಅವರ ಮೇಲೆ ನಂಬಿಕೆ ಇಟ್ಟಿದ್ದರು. 6 ಮಂದಿ ನಕ್ಸಲರ ಪೈಕಿ ಮುಂಡಗಾರು ಲತಾ ಗೌರಮ್ಮ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು. ಆ ವೇಳೆ ಪುನರ್ವಸತಿ ಸಮಿತಿಯಿಂದ ಬಂದ ಪತ್ರಗಳನ್ನು ಲತಾ ಅವರಿಗೆ ನೀಡುತ್ತಿದ್ದರು.

ಸರ್ಕಾರದ ಪತ್ರಗಳು ಮತ್ತು ಪುನರ್ವಸತಿ ಪ್ಯಾಕೇಜ್ ಅನ್ನು ಪರಿಶೀಲಿಸಿದ ನಕ್ಸಲರು ಸರ್ಕಾರದ ಮೇಲೆ ನಂಬಿಕೆ ಇರಿಸಿ, ಶರಣಾಗಲು ನಿರ್ಧರಿಸಿದರು ಎಂದು ಸಮಿತಿ ಸದಸ್ಯ ಪಾರ್ವತೀಶ ಬಿಳಿದಾಳೆ ಅವರು ಹೇಳಿದ್ದಾರೆ.

You may also like