Chaitra Kundapura : ರಸ್ತೆಯಲ್ಲಿ ಮಲಗಿದಂತಹ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಆತನು ತಾನೇಕೆ ಈ ರೀತಿ ಮಾಡಿದೆ ಎಂದು ಕಾರಣವನ್ನು ತಿಳಿಸಿದ್ದಾನೆ. ಈ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಹಿಂದೂ ಫೈಯರ್ ಬ್ರಾಂಡ್ ಚೈತ್ರ ಕುಂದಾಪುರ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾಯಿ, ಬೆಕ್ಕುಗಳಿಗೆ ಏನಾದರೂ ಅದರೆ ಧ್ವನಿ ಎತ್ತುವ ಪ್ರಾಣಿದಯಾ ಸಂಘ ಈಗ ಎಲ್ಲಿದೆ? ನಿಮ್ಮ ಪ್ರಾಣಿಗಳ ವಿಭಾಗದಲ್ಲಿ ಹಸುಗಳು ಬರುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹಸುಗಳಿಗಾಗಿ ಪ್ರಾಣಿದಯಾ ಸಂಘಗಳು ಧ್ವನಿ ಎತ್ತೋದಿಲ್ವಾ? ಬಿಹಾರದ ವ್ಯಕ್ತಿ ಬಂದು ಇಲ್ಲಿ ಬಂದು ಹಸುಗಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಇಂತ ಘಟನೆ ಮರುಕಳಿಸದ ರೀತಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದ್ದಾರೆ.
ಗೋವುವನ್ನು ನಾವು ಹಸು ಅಂತ ನೋಡಲ್ಲ ಮಾತೆ ಅಂತ ಪೂಜೋ ಮಾಡ್ತೀವಿ. ಕುಡಿದ ಮತ್ತಿನಲ್ಲಿ ಮಾಡಿರೋದು ಅನ್ನೋ ಮಾತು ಕೇಳಿ ಬರ್ತಿದೆ. ಅದು ಉದ್ದೇಶ ಊರ್ವಕವಾಗಿ ಮಾಡಿರುವಂತ ವಿಕೃತಿ ಕೆಲಸ. ಬೇಸರದ ವಿಚಾರದ ಅಂದರೆ ಬಿಎನ್ ಎಸ್ ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಇದರ ಜೊತೆಗೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿರುವ ಪ್ರಕರಣವನ್ನು ದಾಖಲಿಸ ಬೇಕು ಎಂದಿದ್ದಾರೆ. ಇದು ಖಂಡಿತ ಚಿಕ್ಕ ಘಟನೆ ಅಲ್ಲ ಏನೋ ಸಂದೇಶ ಕೊಡ್ತಿದ್ದಾರೆ ಅನ್ಸುತ್ತೆ ಎಂದಿದ್ದಾರೆ.
