Home » Chaitra Kundapura : ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮಹತ್ವದ ನಿರ್ಧಾರ ಕೈಗೊಂಡ ಚೈತ್ರ ಕುಂದಾಪುರ – ಸಾರ್ವಜನಿಕರಿಂದ ಭಾರಿ ಮೆಚ್ಚುಗೆ

Chaitra Kundapura : ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮಹತ್ವದ ನಿರ್ಧಾರ ಕೈಗೊಂಡ ಚೈತ್ರ ಕುಂದಾಪುರ – ಸಾರ್ವಜನಿಕರಿಂದ ಭಾರಿ ಮೆಚ್ಚುಗೆ

0 comments

Chaitra Kundapura : ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಕುಂದಾಪುರ ವಿಧಾನಸಭಾ ಚುನಾವಣೆಯ ಬಳಿಕ ಹಲವಾರು ವಿವಾದಗಳಿಂದ ಸುದ್ದಿಯಾಗಿದ್ದರು. ಆದರೆ ನಂತರದಲ್ಲಿ ಬಿಗ್ ಬಾಸ್ ಮನೆಗೆ ತೆರಳಿ ಮತ್ತೆ ತಮ್ಮ ಮೊದಲಿನ ವರ್ಚಸ್ಸನ್ನು ಮರಳಿ ಪಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಬೆನ್ನಲ್ಲೇ ಚೈತ್ರ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ನಿರ್ಧಾರವನ್ನು ಕೇಳಿ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು, ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಯಲ್ಲಿ ಮಾತಿನಿಂದಲೇ ಛಾಪು ಮೂಡಿಸಿದ್ದ ಸ್ಪರ್ಧಿ. ಇದೀಗ ಅವರು ಎಲಿಮಿನೇಟ್‌ ಆಗಿದ್ದಾರೆ. ಹಾಗಾದರೆ ಬಿಗ್ ಬಾಸ್ ಜರ್ನಿ ಬಳಿಕ ಚೈತ್ರ ಅವರ ಮುಂದಿನ ನಡೆ ಏನು ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅವರು ನಾನು ಎಲ್​ಎಲ್​ಬಿ ಓದಬೇಕು ಎಂದುಕೊಂಡಿದ್ದೇನೆ. ಅದನ್ನು ಮಾಡಿಯ ತೀರುತ್ತೇನೆ. ಯಾಕೆಂದರೆ ಮಾಡದ ತಪ್ಪಿಗೆ ಅನೇಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಪರ ನಿಲ್ಲಬೇಕಿದೆ. ನಾನು ಲಾಯರ್ ಆಗಿ ಅವರೆಲ್ಲರ ಮಾತಿಗೆ ಧ್ವನಿ ಯಾಗಬೇಕೆಂದಿದ್ದೇನೆ. ಹೀಗಾಗಿ ನನ್ನ ಮುಂದಿನ ಗುರಿ ಲಾಯರ್ ಆಗುವುದು ಎಂದು ಹೇಳಿದ್ದಾರೆ.

You may also like