Gadaga: ಇಬ್ಬರು ಯುವಕರು ನನ್ನನ್ನೇ ಪ್ರೀತಿಸಬೇಕು ಎಂದು ಹದಿನೈದು ವರ್ಷದ ಬಾಲಕಿಯ ಹಿಂದೆ ಬಿದ್ದ ಕಾರಣ ಮನನೊಂದ ಆ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೀನಿಗೆ ಶರಣಾದ ಅಮಾನುಷ ಘಟನೆ ಬೆಳಕಿಗೆ ಬಂದಿದೆ
ಹೌದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬಣಗಾರ ಕಾಲೋನಿಯಲ್ಲಿ ಮನ ಮಿಡಿಯುವ ಈ ಘಟನೆ ನಡೆದಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿಯನ್ನು ಖುಷಿ (15) ಎಂದು ತಿಳಿದು ಬಂದಿದ್ದು, ಈಕೆ 9ನೇ ತರಗತಿಯಲ್ಲಿ ಓದುತ್ತಿದ್ದಳು.
ಇನ್ನೂ ಅದೇ ಊರಿನವರ ಯುವಕರಾದ ಮುತ್ತುರಾಜ್ ಮ್ಯಾಗೇರಿ ಹಾಗೂ ಜುನೇದಸಾಬ್ ಕಂದಗಲ್ ಅವರ ಲವ್ ಕಿರುಕುಳ ನೀಡಿದ ಯುವಕರು ಎನ್ನಲಾಗಿದೆ. ಈ ಇಬ್ಬರು ಸೇರಿ ಈ ಖುಷಿಯನ್ನು ಲವ್ ಮಾಡ್ತಿದ್ದರು. ಈ ವಿಷಯ ಗೊತ್ತಾಗಿ ಇಬ್ಬರಿಗೂ ತಾಕೀತು ಮಾಡಲಾಗಿತ್ತು. ಆದರೂ ಇಬ್ಬರು ಆಗಾಗ ಭೇಟಿಯಾಗಿ ಮಾತನಾಡಿ ಟಾರ್ಚರ್ ನೀಡುತ್ತಿದ್ದರು. ಈ ಟಾರ್ಚರ್‌ನಿಂದ ಬೇಸತ್ತು ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ. ಸದ್ಯ ಇಬ್ಬರು ಯುವಕರ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
