Home » RG Kar Rape Case: ಕೋಲ್ಕತ್ತಾ ತರಬೇತಿ ವೈದ್ಯೆಯ ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

RG Kar Rape Case: ಕೋಲ್ಕತ್ತಾ ತರಬೇತಿ ವೈದ್ಯೆಯ ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

0 comments

RG Kar Rape Case: ಕೋಲ್ಕತ್ತಾದ ವಿಶೇಷ ನ್ಯಾಯಾಲಯವು ಸೋಮವಾರ (ಜನವರಿ 20) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಹಿಳಾ ವೈದ್ಯೆಯ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿ ಸಂಜಯ್ ರಾಯ್‌ಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿ ಸಂಜಯ್ ರಾಯ್‌ಗೆ ಪಶ್ಚಿಮ ಬಂಗಾಳದ ಸೀಲ್ದಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರೂ.50,000 ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಆರೋಪಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದರು.

ನ್ಯಾಯಾಧೀಶರು ಜನವರಿ 18 ರಂದು ಈ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ “ಮರಣದಂಡನೆ” ಆಗಿರಬಹುದು, ಆದರೆ ಕನಿಷ್ಠ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್‌ ರಾಯ್ ವಿರುದ್ಧದ ಶಿಕ್ಷೆಯ ಪ್ರಕ್ರಿಯೆಯು ಸೋಮವಾರ ಪೂರ್ಣಗೊಂಡಿದೆ. ಆದರೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಾಕ್ಷ್ಯವನ್ನು ತಿರುಚುವುದು ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಯುತ್ತದೆ.

ಕಳೆದ ವರ್ಷ ಆಗಸ್ಟ್ 9 ರಂದು ಬೆಳಿಗ್ಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದ ಸೆಮಿನಾರ್ ಹಾಲ್‌ನಿಂದ ಮಹಿಳಾ ವೈದ್ಯೆಯೋರ್ವರ ಶವವನ್ನು ವಶಪಡಿಸಿಕೊಳ್ಳಲಾಗಿತ್ತು.ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡ ನಡೆಸಿದ್ದು, ಸಂಜಯ್‌ ರಾಯ್ ಎಂಬಾತನನ್ನು ಬಂಧನ ಮಾಡಿತ್ತು. ಅಪರಾಧದ ದಿನಾಂಕದ ಐದು ದಿನಗಳ ನಂತರ ಸಿಬಿಐ ತನಿಖೆಯನ್ನು ಪ್ರಾರಂಭಿಸಿತು ಮತ್ತು ನಂತರ ಸಂಜಯ್‌ ರಾಯ್  ನಗರ ಪೊಲೀಸರು ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು ಈ ಪ್ರಕರಣದ ವಿಚಾರಣೆ ಕಳೆದ ವರ್ಷ ನವೆಂಬರ್ 11 ರಂದು ಪ್ರಾರಂಭವಾಯಿತು. ಪ್ರಕರಣದ ವಿಚಾರಣೆ ಆರಂಭವಾದ 59 ದಿನಗಳ ನಂತರ ತೀರ್ಪು ಪ್ರಕಟವಾಗಿದೆ. ಅಪರಾಧದ ದಿನಾಂಕದಿಂದ 162 ದಿನಗಳ ನಂತರ ಶಿಕ್ಷೆಯ ಪ್ರಕ್ರಿಯೆಯು ಪೂರ್ಣಗೊಂಡಿತು.

You may also like