Home » Ullala: ಕೋಟೆಕಾರ್ ಬ್ಯಾಂಕಿನಲ್ಲಿ ಎಷ್ಟು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಆಗಿದೆ ಗೊತ್ತಾ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಬ್ಯಾಂಕ್ ಅಧ್ಯಕ್ಷ

Ullala: ಕೋಟೆಕಾರ್ ಬ್ಯಾಂಕಿನಲ್ಲಿ ಎಷ್ಟು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಆಗಿದೆ ಗೊತ್ತಾ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಬ್ಯಾಂಕ್ ಅಧ್ಯಕ್ಷ

0 comments

Ullala: ಮಂಗಳೂರಿನಲ್ಲಿ ಮಠ ಮಠ ಮಧ್ಯಾಹ್ನದ ವೇಳೆ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ಬರೋಬ್ಬರಿ ಚಿನ್ನ ಮತ್ತು ಹಣವನ್ನು ದರೋಡೆ ಮಾಡಲಾದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಬ್ಯಾಂಕಿನಿಂದ ಆರೋಪಿಗಳು ಎಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂಬುದಾಗಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಹೌದು, ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಟ್ಟು ದರೋಡೆಕೋರರನ್ನು 15 ಕೋಟಿಯ ಬೆಲೆಬಾಳುವ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ. ಚಿನ್ನದ ಜೊತೆ 11 ಲಕ್ಷ 70 ಸಾವಿರ ನಗದು ಕೂಡ ಕಳವು ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದರೋಡೆಕೊರನ ಕಾಲಿಗೆ ಗುಂಡು ಹಾರಿಸಿದ ಸ್ಥಳಕ್ಕೆ ಆಗಮಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು. ಒಟ್ಟು ಕಳವಾದ ಚಿನ್ನಾಭರಣದ ಮೌಲ್ಯ ಒಟ್ಟು 15 ಕೋಟಿಗೂ ಎಂದರು. ಎಂಟು ಕೋಟಿಯ ಚಿನ್ನ ಲಾಕರಿನಲ್ಲಿ ಉಳಿದಿದೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

You may also like