Home » Justice Krishna Dixit: ಬ್ರಾಹ್ಮಣರು ಇಲ್ಲದಿದ್ದರೆ ಸಂವಿಧಾನ 25 ವರ್ಷ ತಡವಾಗಿ ರಚನೆಯಾಗುತ್ತಿತ್ತು – ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್

Justice Krishna Dixit: ಬ್ರಾಹ್ಮಣರು ಇಲ್ಲದಿದ್ದರೆ ಸಂವಿಧಾನ 25 ವರ್ಷ ತಡವಾಗಿ ರಚನೆಯಾಗುತ್ತಿತ್ತು – ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್

0 comments

Justice Krishna Dixit ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಬ್ರಾಹ್ಮಣರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರಡು ಸಮಿತಿಯ ಏಳು ಸದಸ್ಯರಲ್ಲಿ ಮೂವರು ಬ್ರಾಹ್ಮಣರಾಗಿದ್ದರು. ಸಮಿತಿಯಲ್ಲಿ ಬ್ರಾಹ್ಮಣರು ಇರದಿದ್ದರೆ ಸಂವಿಧಾನವು 25 ವರ್ಷ ತಡವಾಗಿ ರಚನೆಯಾಗುತ್ತಿತ್ತು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್( Justice Krishna S Dixit)ಅವರು ಹೇಳಿಕೆ ನೀಡಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ ವರ್ಷ ನಿಮಿತ್ತ ಆಯೋಜಿಸಲಾದ 2 ದಿನಗಳ ಬ್ರಾಹ್ಮಣ ಸಮ್ಮೇಳನ ‘ವಿಶ್ವಾಮಿತ್ರ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನವನ್ನು ನಿರ್ಮಿಸಿದ ಡಾ. ಭೀಮರಾವ ಅಂಬೇಡ್ಕರ್ ಅವರು ಭಂಡಾರ್ಕರ್ ಸಂಸ್ಥೆಯಲ್ಲಿ, ಬಿ.ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ಸಿದ್ಧಪಡಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಅಲ್ಲದೆ ವೇದಗಳನ್ನು ವರ್ಗೀಕರಿಸಿದ ವೇದವ್ಯಾಸರು ಮೀನುಗಾರನ ಮಗ ಆಗಿದ್ದರು ಮತ್ತು ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದರು. ಬ್ರಾಹ್ಮಣರಾದ ನಾವು ಅವರನ್ನು ಕೀಳಾಗಿ ನೋಡಿದ್ದೇವೆಯೇ ? ನಾವು ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ ಎಂದು ಹೇಳಿದರು.

You may also like