10
Bigg Boss: ಬರೋಬ್ಬರಿ 5.23 ಕೋಟಿ ಮತಗಳನ್ನು ಪಡೆದುಕೊಳ್ಳುವ ಮೂಲಕ ಹನುಮಂತು ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಬೆನ್ನಲ್ಲೇ ಹನುಮಂತ ಅವರಿಗೆ 50 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಆದರೆ ಹನುಮಂತ ಅವರಿಗೆ ಸಿಕ್ಕಿದ್ದು ಕೇವಲ 50 ಲಕ್ಷ ರೂಪಾಯಿ ಅಲ್ಲ. ಇನ್ನೂ ಹೆಚ್ಚಿನ ಹಣ ಸಿಕ್ಕಿದೆ ಎನ್ನಲಾಗಿದೆ. ಹಾಗಿದ್ರೆ ಹನುಮಂತಗೆ ಸಿಕ್ಕ ಹಣವೆಷ್ಟು?
ಹನುಮಂತಗೆ ಸಿಕ್ಕ ಹಣವೆಷ್ಟು?
Indus Tmt Steelವತಿಯಿಂದ ಹನುಮಂತ ಅವರಿಗೆ 10 ಲಕ್ಷ ರೂಪಾಯಿ ನೀಡಲಾಯ್ತು. ನಂತರ ಲಕ್ಷುರಿ ಪಾಯಿಂಟ್ಸ್ ನೀಡುತ್ತಿದ್ದ ಜಾರ್ ಆಪ್ ವತಿಯಿಂದ ವಿನ್ನರ್ ಆಗಿರುವ ಹನುಮಂತರಿಗೆ 5 ಲಕ್ಷ ರೂಪಾಯಿ ನೀಡಲಾಯ್ತು, ಇದಾದ ಬಳಿಕ ಕಾನ್ಫಿಡೆಂಟ್ ಗ್ರೂಪ್‌ನಿಂದ 50 ಲಕ್ಷ ರೂಪಾಯಿ ಕೊಡಲಾಗಿದೆ. ಬಹುಮಾನವಾಗಿ ಒಟ್ಟು 65 ಲಕ್ಷ ರೂಪಾಯಿ ಹಣ ಹನುಮಂತ ಅವರಿಗೆ ಸಿಕ್ಕಿದೆ.
ಇನ್ನು ಇನ್ನು ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.
