Home » Nagasadhu: ಮೊಬೈಲ್, ವಾಚ್ ಏನೂ ಇಲ್ಲದಿದ್ರೂ ನಾಗಸಾಧುಗಳು ಕುಂಭಮೇಳಕ್ಕೆ ಸರಿ ಸಮಯಕ್ಕೆ ಬರುವುದು ಹೇಗೆ?

Nagasadhu: ಮೊಬೈಲ್, ವಾಚ್ ಏನೂ ಇಲ್ಲದಿದ್ರೂ ನಾಗಸಾಧುಗಳು ಕುಂಭಮೇಳಕ್ಕೆ ಸರಿ ಸಮಯಕ್ಕೆ ಬರುವುದು ಹೇಗೆ?

0 comments

Nagasadhu: ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಹಬ್ಬವಾದ ಕುಂಭಮೇಳದಲ್ಲಿ ನಾಗಸಾಧುಗಳದ್ದೇ ಪ್ರಮುಖ ಆಕರ್ಷಣೆ. ಇವರ ಕುರಿತು ಹಲವಾರು ಕುತೂಹಲ ವಿಚಾರಗಳು ದಿನ ಕಳೆದಂತೆ ಬೆಳಕಿಗೆ ಬರುತ್ತದೆ. ಅಂತೀಯ ಇದೀಗ ಅಚ್ಚರಿ ವಿಚಾರವನ್ನು ಮುನ್ನಲೆಗೆ ಬಂದಿದ್ದು ಮೊಬೈಲ್, ವಾಚು, ಗಡಿಯಾರ ಯಾವುದೇ ವಸ್ತುಗಳು ಇಲ್ಲದಿದ್ದರೂ ಅವರು ಕುಂಭಮೇಳಕ್ಕೆ ಸರಿಯಾದ ಸಮಯದಲ್ಲಿ ಹಾಜರಿರುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಇಲ್ಲಿದೆ ನೋಡಿ ಉತ್ತರ.

ಹೌದು, ನಾಗಸಾಧುಗಳು(Nagasadhu) ವ್ಯಾವಹಾರಿಕ ಲೋಕದಿಂದಲೇ ದೂರವುಳಿದವರು. ಅವರು ನಮ್ಮ ನಿಮ್ಮಂತೆ ಮೊಬೈಲ್, ನ್ಯೂಸ್ ಯಾವುದೂ ನೋಡಲ್ಲ. ಹಾಗಿದ್ದರೂ ಸರಿಯಾಗಿ ಕುಂಭಮೇಳ ನಡೆಯುವ ಸಮಯಕ್ಕೇ ಎಲ್ಲೋ ಗುಹೆಗಳಲ್ಲಿರುವ ಅವರು ಬಂದು ಸೇರುತ್ತಾರೆ.

ಈ ಒಂದು ಕುಂಭಮೇಳಕ್ಕಾಗಿ ಎಲ್ಲೋ ಹಿಮಾಲಯದಲ್ಲಿ, ಗುಹೆಗಳಲ್ಲಿ ತಪಸ್ಸಿಗೆ ಕುಳಿತವರು ಪರ್ವತವಿಳಿದು ಸಾವಿರಾರು ಮೈಲಿ ಸಂಚಾರ ಮಾಡಿ ತಲುಪಬೇಕಾದ ಸ್ಥಳಕ್ಕೇ ಬಂದು ತಲುಪುತ್ತಾರೆ. ಇದು ನಿಜವಾದ ಪವಾಡವೆಂದೇ ಹೇಳಬೇಕು. ಇದಕ್ಕೇ ನಾಗಸಾಧುಗಳು ಎಂದರೆ ನಿಜವಾದ ಸನ್ಯಾಸಿಗಳು ಎಂದು ಎಲ್ಲರೂ ಗೌರವಿಸುವುದು.

You may also like