5
Prayagraj: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ (ಇಂದು) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಾಧುಗಳ ಜೊತೆ ಸೇರಿ ಪವಿತ್ರ ಸ್ನಾನ ಮಾಡಿದ್ದಾರೆ.
ಐಸಿಸಿ ಅಧ್ಯಕ್ಷ ಮತ್ತು ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಗಂಡು ಮಗುವಿಗೆ ಸಾಧುಗಳು ಈ ಸಂದರ್ಭದಲ್ಲಿ ಆಶೀರ್ವಾದ ಮಾಡಿದರು.
ತ್ರಿವೇಣಿ ಸಂಗಮದಲ್ಲಿ ಅಮಿತ್ ಅವರು ಪವಿತ್ರ ಸ್ನಾನ ಮಾಡಿದ್ದು, ಇವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್‌ದೇವ್ ಸೇರಿದಂತೆ ಹಲವು ಸಂತರು ಮತ್ತು ಸಾಧುಗಳು ಭಾಗಿಯಾಗಿದ್ದರು.
