Hanumantu: ಎಲ್ಲರೂ ಊಹೆ ಮಾಡಿನಂತೆ ಬಿಗ್ ಬಾಸ್ ಕನ್ನಡ ಸೀಸನ್ 11ನ ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. 50 ಲಕ್ಷ ಬಾಚಿಕೊಂಡು ಹನುಮಂತ ಮನೆಗೆ ತೆರಳಿದ್ದಾರೆ. ಈ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದರು. ಅನೇಕರು ಹನುಮಂತ ಎಲ್ಲಿ ಎಲ್ಲಿ ಎಂದು ಹುಡುಕುತ್ತಿದ್ದರು. ಇದೀಗ ಅವರು ಪ್ರೆಸ್ ಮೀಟ್ ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷ ಆಗಿದ್ದಾರೆ.
View this post on Instagram
ಹೌದು, ಮಾಧ್ಯಮಗಳು ಏರ್ಪಡಿಸಿದ ಪ್ರೆಸ್ ಮೀಟಿನಲ್ಲಿ ಹನುಮಂತ ಪ್ರತ್ಯಕ್ಷ ಆಗಿದ್ದು ನಾನು ಎಲ್ಲಿಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಮಾಧ್ಯಮದಲ್ಲಿ ನಿರೂಪಕರು ನಾವೆಲ್ಲರೂ ಹನುಮಂತ ಇಲ್ಲಿ ಎಲ್ಲಿ ಎಂದು ಹುಡುಕುತ್ತಿದ್ದೆವು ಟ್ರೋಫಿ ಗೆದ್ದ ಬಳಿಕ ನೀವು ಕಾಣೆಯಾಗಿದ್ದೀರಿ. ಈಗ ಇದಕ್ಕಿಂತ ಪ್ರತ್ಯಕ್ಷ ಆಗಿದ್ದೀರಿ ಎಂದು ಪ್ರಶ್ನೆಸಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಹನುಮಂತು ಅವರು ‘ಎಲ್ಲರೂ ಹುಡುಕುತ್ತಿದ್ದೀರಿ. ಆದರೆ ನಾನು ಹೋಗಿ ಮಲಗಿಕೊಂಡಿದ್ದೆ ನಿದ್ದೆ ಇರಲಿಲ್ಲ. ಇವತ್ತು ತಡವಾಗಿ ಎದ್ದೆ ಹಾಗಾಗಿ ಕಾಣಿಸಿಕೊಳ್ಳುವುದು ಲೇಟಾಯ್ತು. ದಯವಿಟ್ಟು ಕ್ಷಮಿಸಿ’ ಎಂದು ಹೇಳಿದ್ದಾರೆ.
ಅಲ್ಲದೆ ಕನ್ನಡಿಗರಾದ ನಿಮ್ಮೆಲ್ಲರ ಪ್ರೀತಿ-ವಿಶ್ವಾಸದಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ನೀವೆಲ್ಲರೂ ಸೇರಿ ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮೆಲ್ಲರಿಗೂ ಕೂಡ ನಾನು ಚಿರಋಣಿಯಾಗಿರುತ್ತೇನೆಂ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಹೇಳಿದ್ದಾರೆ
