Arecanut : ಕಳೆದ ವರ್ಷ ಸಾಕಷ್ಟು ಏಳು ಬೀಳು ಕಂಡಿದ್ದ ಅಡಿಕೆ ಬೆಲೆ ಈಗ ಚೇತರಿಸಿಕೊಳ್ಳುತ್ತಿದ್ದು ನಿಧಾನವಾಗಿಯಾದರೂ ಏರಿಕೆಯಾಗುತ್ತಿದೆ. ವಿವಿಧ ರೋಗಬಾಧೆಗಳಿಂದ ಕಂಗೆಟ್ಟಿದ್ದ ರೈತರಿಗೆ ಬೆಲೆ ಕುಸಿತ ನಷ್ಟದ ಭೀತಿಗೆ ಸಿಲುಕಿಸಿತ್ತು. ಆದರೀಗ ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿದ್ದು ಬೆಳೆಗಾರರು ನಿರಾಳವಾಗಿದ್ದಾರೆ.
ಎಷ್ಟು ಏರಿಕೆ?
ರಾಶಿ ಅಡಿಕೆ ಧಾರಣೆ ಮತ್ತೆ 50 ಸಾವಿರ ರೂಪಾಯಿ ಗಡಿ ದಾಟಿದ್ದು ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಗುರುವಾರ ಕೊಪ್ಪ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ. ಶಿವಮೊಗ್ಗದಲ್ಲಿ ಕೂಡ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 30,369 ರೂಪಾಯಿ ಇದ್ದರೆ ಗರಿಷ್ಠ 52,259 ರೂಪಾಯಿ ಆಗಿತ್ತು. ಸರಕು ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 45,029 ರೂಪಾಯಿ ಇದ್ದರೆ ಗರಿಷ್ಠ 86,630 ರೂಪಾಯಿ ಆಗಿತ್ತು.
ಸಧ್ಯ ಅಡಿಕೆ ಬೆಲೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸವಿದೆ.
