Home » Karkala: ಬಾವನ ಮೇಲೆ ಭಾಮೈದನಿಂದ ಮಾರಕಾಸ್ತ್ರದಿಂದ ದಾಳಿ

Karkala: ಬಾವನ ಮೇಲೆ ಭಾಮೈದನಿಂದ ಮಾರಕಾಸ್ತ್ರದಿಂದ ದಾಳಿ

0 comments
Crime

Karkala: ಬಾವನ ಮೇಲೆಯೇ ಭಾಮೈದ ಮಾರಾಕಾಸ್ತ್ರದಿಂದ ದಾಳಿ ಮಾಡಿ ಗಂಭಿರವಾಗಿ ಗಾಯಗೊಳಿಸಿದ ಘಟನೆಯೊಂದು ಕಾರ್ಕಳದ ಶಿವತಿಕೆರೆಯಲ್ಲಿ ಇಂದು (ಸೋಮವಾರ ಫೆ.3) ನಡೆದಿರುವ ಕುರಿತು ವರದಿಯಾಗಿದೆ.

ಮಹಮ್ಮದ್‌ ರಿಜ್ವಾನ್‌ ಗಂಭೀರವಾಗಿ ಗಾಯಗೊಂಡ ವ್ಯಕ್ತಿ.

ಮಹಮ್ಮದ್‌ ರಿಜ್ವಾನ್‌ಗೆ ಆತನ ಹೆಂಡತಿಯ ಅಣ್ಣ ಅಶ್ರಫ್‌ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗಳಿಸಿರುವ ಪರಿಣಾಮದಿಂದ ತಲೆ, ಕುತ್ತಿಗೆ, ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2017 ರಲ್ಲಿ ರಿಜ್ವಾನ್‌ಗೆ ಅಶ್ರಫ್‌ನ ತಂಗಿ ಮೈಮುನಾಳನ್ನು ಕೊಟ್ಟು ಮದುವೆ ಮಾಡಿಸಲಾಗಿತ್ತು. 2023 ರಲ್ಲಿ ಮೈಮುನಾ ಗಂಡನ ಮನೆಯವರ ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೈಮುನಾ ತನ್ನ ಅತ್ತೆ, ಮಾವ, ಇತರ ಕುಟುಂಬದ ಸದಸ್ಯರು ಮಾನಸಿಕ ಹಿಂಸೆ ನೀಡುತ್ತಿರುವ ಕುರಿತು ಈ ಹಿಂದೆ ದೂರು ನೀಡಿದ್ದಳು. ಈ ಪ್ರಕರಣ ಇನ್ನೊಂದು ಹಿಂಸಾತ್ಮಕ ರೂಪ ಪಡೆದುಕೊಂಡಿದೆ.

You may also like