Home » Micro Finance: ಮೈಕ್ರೋ ಫೈನಾನ್ಸ್ ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಿಸಿದ್ದೇವೆ: ಪರಮೇಶ್ವರ್

Micro Finance: ಮೈಕ್ರೋ ಫೈನಾನ್ಸ್ ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಿಸಿದ್ದೇವೆ: ಪರಮೇಶ್ವರ್

0 comments
Dr G parameshwar

Micro Finance: ಬಲವಂತವಾಗಿ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ (Micro Finance) ಕಂಪನಿಯ ಸಿಬ್ಬಂದಿ ವಿರುದ್ಧ 3 ವರ್ಷ ಇದ್ದ ಶಿಕ್ಷೆಯ ಅವಧಿಯನ್ನು 10 ವರ್ಷಕ್ಕೆ ಏರಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಿರುಕುಳ ನೀಡಿದವರಿಗೆ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ಜೊತೆಗೆ ದಂಡ ಕೂಡಾ 5 ಲಕ್ಷ ಮಾಡಿದ್ದೇವೆ ಎಂದರು.

ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ. ಇದಕ್ಕಾಗಿ ಫೈನ್ ಮತ್ತು ಶಿಕ್ಷೆ ಎರಡನ್ನೂ ಜಾಸ್ತಿ ಮಾಡಿದ್ದೇವೆ. ಈಗಾಗಲೇ ರಾಜ್ಯಪಾಲರಿಗೆ ಬಿಲ್ ಕಳಿಸಿದ್ದೇವೆ. ಅವರು ಸಹಿ ಮಾಡಿದ ಕೂಡಲೇ ಸುಗ್ರೀವಾಜ್ಞೆ ಜಾರಿ ಆಗಲಿದೆ ಎಂದು ಹೇಳಿದರು.

You may also like