8
Daali Dhananjaya: ಆನ್ ಲೈನ್ ಬೆಟ್ಟಿಂಗ್ ಆಡೋರಿಗೆ ಡಾಲಿ (Daali Dhananjaya) ಏನ್ ಹೇಳಿದ್ರು ನೀವೇ ನೋಡಿ. ಹೌದು, ಆನ್ಲೈನ್ ಬೆಟ್ಟಿಂಗ್ ಹಾವಳಿಗೆ ಎಷ್ಟೋ ಜನರ ಬದುಕು ಹಾಳಾಗಿದೆ. ಅಂತಹ ಬೆಟ್ಟಿಂಗ್ ವಿರುದ್ಧ ಡಾಲಿ ಧನಂಜಯ ಗುಡುಗಿದ್ದಾರೆ.
ಡಾಲಿ ಪ್ರಕಾರ ” ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಬೇಡಿ ಎಂದು ಅಭಿಮಾನಿಗಳಿಗೆ ಡಾಲಿ ಕಿವಿಮಾತು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿಯಾಗಿದ್ದ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವೇಳೆ ಎಲ್ಲರನ್ನೂ ತಮ್ಮ ಮದುವೆಗೆ ಆಹ್ವಾನಿಸಿದರು. ನಂತರ ಅಭಿಮಾನಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಕೊನೆವರೆಗೂ ನಿಮ್ಮ ಪ್ರೀತಿ ಹೀಗೆಯೇ ಇರಲಿ ಎಂದು ಅವರು ಹೇಳಿದ್ದಾರೆ.
