Charmadi : ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಾಡ್ಗಿಚ್ಚು ಪ್ರಕರಣಕ್ಕೆ ಕಾರಣ ಏನೆಂಬುದು ತನಿಖೆಯಲ್ಲಿ ಬಯಲಾಗಿದೆ.
ಹೌದು, ಚಾರ್ಮಡಿ ಘಾಟ್ ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿರುವುದು ಅರಣ್ಯ ಇಲಾಖೆ ತನಿಖೆಯಲ್ಲಿ ಪತ್ತೆಯಾಗಿದೆ. ಕಾಡ್ಗಿಚ್ಚಿನಲ್ಲಿ ಕೋಟ್ಯಾಂತರ ಮೌಲ್ಯದ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಹೀಗಾಗಿ ಕಿಡಿಗೇಡಿಗಳ ಕೃತ್ಯದ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದು, ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ.
ಅಂದಹಾಗೆ ರಾತ್ರಿ ವೇಳೆ ಶಿಕಾರಿಗೆ ತೆರಳಿದ್ದ ವೇಳೆ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿದ್ದು, ಅದು ಕಾಡ್ಗಿಚ್ಚಾಗಿ ಹಬ್ಬಿದೆ. ಪ್ರಕರಣ ಸಂಬಂಧ ಮೂಡಿಗೆರೆ ಅರಣ್ಯ ಇಲಾಖೆಯಿಂದ ಎಫ್‌ಐಆರ್ ದಾಖಲಾಗಿದೆ. ಕಿಡಿಗೇಡಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
