Home » ಗುರುವಾಯನಕೆರೆ ವಿಜಯ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ ಆಯ್ಕೆ

ಗುರುವಾಯನಕೆರೆ ವಿಜಯ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ ಆಯ್ಕೆ

by Praveen Chennavara
0 comments

ಬೆಳ್ತಂಗಡಿ : ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅಜಿತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಯಂತ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ನಿರ್ದೇಶಕರಾಗಿ ಎಂ.ಜಯರಾಮ ಭಂಡಾರಿ, ಬಾಲಕೃಷ್ಣ ಪೂಂಜ ಎಚ್‌., ಎಸ್ .ಜಯರಾಮ ಶೆಟ್ಟಿ ಎಂ.ಗೋಪಾಲಕೃಷ್ಣಶೆಟ್ಟಿ ಕೃಷ್ಣರೈ, ಮಂಜುನಾಥ ರೈ, ಸೀತಾರಾಮ ಶೆಟ್ಟಿ ಜಯರಾಮ ಶೆಟ್ಟಿ ಎಂ., ಪುಷ್ಪರಾಜ ಶೆಟ್ಟಿ ರಾಜು ಶೆಟ್ಟಿ ರಘುರಾಮ ಶೆಟ್ಟಿ ಪುರಂದರ ಶೆಟ್ಟಿ ಸಾರಿಕ ಶೆಟ್ಟಿ ವಿಜಯ ಬಿ.ಶೆಟ್ಟಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಹಾಗೂ ಸಿಬಂದಿ ಸಹಕರಿಸಿದರು.

You may also like