Putturu: ಪುತ್ತೂರು ನಗರದ ಏಳ್ಮುಡಿಯಲ್ಲಿ ಪ್ರಭು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾಗಿದೆ. 2024-25ನೇ ಸಾಲಿನ ಪ್ರತಿಷ್ಠಿತ ಸ್ವಾಮಿ ವಿವೇಕಾನಂದರ ರಾಜ್ಯ ಸದ್ಭಾವನಾ ಸಾಂಘಿಕ ಪ್ರಶಸ್ತಿಗೆ ಪ್ರೇರಣಾ ಸಂಸ್ಥೆಯನ್ನು ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಬ್ರಿಗೇಡ್ ಹಾಗೂ ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ ಮತ್ತು ಧರ್ಮ ಯುದ್ಧ ದಿನಪತ್ರಿಕೆ ಬಳಗ ಮುದ್ದೇಬಿಹಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ನಡೆದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕ ಯುವ ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುತ್ತೂರು ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ವಸಂತ್ ವೀರಮಂಗಲ ಮತ್ತು ನಾಗೇಶ್ ಕೆ. ಕೆಡೆಂಜಿ ಅವರು ಪ್ರಶಸ್ತಿ ಸ್ವೀಕರಿಸಿದರು. ಸಿದ್ದನಕೊಳ್ಳ ಸುಕ್ಷೇತ್ರ ನಿರಂತರ ದಾಸೋಹ ಹಾಗೂ ಕಲಾ ಪೋಷಕ ಮಠದ ಡಾ|| ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ಎಸ್ ತಂಗಡಗಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಸೇರಿದಂತೆ ಹಲವಾರು ಮಂದಿ ಗಣ್ಯರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯತ್ತಿನ ಉನ್ನತ್ತಿನ ದೃಷ್ಟಿ ಕೋಣವನ್ನು ಇಟ್ಟುಕೊಂಡ
‘ಪ್ರೇರಣಾ’ ಸಂಸ್ಥೆ ಐಎಎಸ್, ಐ ಎಫ್ಎಸ್, ಐಪಿಎಸ್, ಸಿಎ, ಸಿಎಂಎ, ನೀಟ್, ಕೆಸೆಟ್, ಪ್ಲೆಸ್ ಮೆಂಟ್ತರಬೇತಿ, ಪ್ಲೆಸ್ಮೆಂಟ್, ಶಿಕ್ಷಣ ಗೈಡ್ ಲೈನ್ಸ್, ಪಿಯುಸಿ ಕೋಚಿಂಗ್, ಡಿಸ್ಟೆನ್ಸ್ ಶಿಕ್ಷಣ, ಲರ್ನಿಂಗ್ ಓರ್ಟರಿ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್, ಆ್ಯಂಕರಿಂಗ್ ತರಬೇತಿ ನೀಡುತ್ತಿದೆ.
‘ಪ್ರೇರಣಾ’ ಸಂಸ್ಥೆಯಿಂದ ಉನ್ನತ ಶಿಕ್ಷಣದ ಮಾಹಿತಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು, ಸರಕಾರಿ ವಸತಿ ನಿಲಯ, ಸರಕಾರಿ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲದ ಕುರಿತು, ಸರಕಾರಿ, ಖಾಸಗಿ ಉದ್ಯೋಗಗಳ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಪ್ರೇರಣಾ ಸಂಸ್ಥೆಯಿಂದ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಯುವ ಜನತೆಯ ಕೌಶಲ್ಯಾಭಿವೃದ್ದಿಗೆ ಆದ್ಯತೆ ನೀಡುವ ಮೂಲಕ ಭಾರತದ ಶಕ್ತಿಗೆ ಜೀವ ತುಂಬುವುದರೊಂದಿಗೆ ‘ ಪ್ರೇರಣಾ’ ಸಾವಿರಾರು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮತ್ತು ಉಚಿತ ವೃತ್ತಿ ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದೆ. ಇಂತಹ ಅನೇಕ ಜನಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸರಕಾರದ ಕೆಲಸಗಳನ್ನು ಹಗುರಗೊಳಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾದ ‘ ಪ್ರೇರಣಾ’ ಕ್ಕೆ ಈ ಪ್ರಶಸ್ತಿ ಅತ್ಯಂತ ಅರ್ಹವಾಗಿಯೇ ಸಂದಿದೆ ಎಂದು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಸೀತಾರಾಮ ಕೇವಳ ತಿಳಿಸಿದ್ದಾರೆ.
—————-
