Home » Bantwala: ಬಂಟ್ವಾಳ: ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ!

Bantwala: ಬಂಟ್ವಾಳ: ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ!

by ಕಾವ್ಯ ವಾಣಿ
0 comments

Bantwala: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಬಂಟ್ವಾಳ (Bantwala) ತಾಲೂಕಿನ ಬಡಕಬೈಲ್ ಎಂಬಲ್ಲಿ ನಡೆದಿದೆ.

ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಆದರೆ ಬೆಂಕಿ ತಗುಲಿದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ.

ತಡರಾತ್ರಿ ಘಟನೆ ಈ ಘಟನೆ ನಡೆದಿದ್ದು ಬೆಂಕಿ ನಂದಿಸಲು ಕೂಡಲೇ ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಪ್ರಯತ್ನ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದ್ದಾರೆ.

You may also like