Home » Mysure : ಮೈಸೂರಿನಲ್ಲಿ ಮುಸ್ಲಿಂ ಯುವಕರ ದಾಂಧಲೆಗೆ ಅಸಲಿ ಕಾರಣವೇನು? ಕ್ಷಣಾರ್ಧದಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದೇಗೆ?

Mysure : ಮೈಸೂರಿನಲ್ಲಿ ಮುಸ್ಲಿಂ ಯುವಕರ ದಾಂಧಲೆಗೆ ಅಸಲಿ ಕಾರಣವೇನು? ಕ್ಷಣಾರ್ಧದಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದೇಗೆ?

0 comments

Mysore: ಮೈಸೂರಿನ ಉದಯಗಿರಿಯಲ್ಲಿ ಕ್ಷುಲಕ ಕಾರಣಕ್ಕೆ ಗಲಭೆ ನಡೆದಿದೆ. ಮುಸ್ಲಿಂ ಯುವಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೆಲವೇ ಗಂಟೆಗಳಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದು ಹೇಗೆ ಎಂಬ ಅನುಮಾನ ಈಗ ಶುರುವಾಗಿದೆ.

ಗಲಭೆಗೆ ಕಾರಣ ಏನು?

ದೆಹಲಿಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಯುವಕ ಪೋಸ್ಟ್ ಮಾಡಿದ್ದ. ಪೋಸ್ಟ್​ ವಿರುದ್ಧ ಸಹಸ್ರಾರು ಜನ ರೊಚ್ಚಿಗೆದ್ದು ಗಲಾಟೆ ಮಾಡಿದ್ದಾರೆ.

ಉದಯ ಗಿರಿಯ ಮುಖ್ಯ ರಸ್ತೆಯ ಯುವಕ ರಾಹುಲ್​ ಗಾಂಧಿ, ಅಖಿಲೇಶ್​ ಯಾದವ್​, ಕೇಜ್ರಿವಾಲ್​ ಭಾವಚಿತ್ರ ಹಾಕಿ ಅದರ ಮೇಲೆ ಮುಸ್ಲಿಂ ಧರ್ಮಗುರುಗಳ ಸಾಲುಗಳನ್ನ ಉಲ್ಲೇಖಿಸಿದ್ದ. ಇದ್ರಿಂದ ಗಲಾಟೆ ನಡೆದಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಘಟನೆ ಕುರಿತು ಉದಯಗಿರಿ ಪೊಲೀಸರು ಸುಮೊಟೋ ಕೇಸ್​ ದಾಖಲಿಸಿಕೊಂಡು ಯುವಕನನ್ನು ​ಬಂಧಿಸಿದ್ದಾರೆ.

ಕಲ್ಲುಗಳು ಬಂದಿದ್ದು ಹೇಗೆ?

ಘಟನೆ ಬಳಿಕ ಸ್ಥಳದಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಪತ್ತೆಯಾಗಿತ್ತು. ಗಲಭೆ ನಡೆಸಲು ಇಲ್ಲಿ ಮೂಟೆಗಟ್ಟಲೆ ಕಲ್ಲು ತಂದಿಟ್ಟವರು ಯಾರು ಎಂಬ ಅನುಮಾನ ಪೊಲೀಸರಿಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಇದೀಗ ಪೊಲೀಸರು ಕಲ್ಲುಗಳನ್ನು ಸಂಗ್ರಹಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಲ್ಲು ತೂರಾಟ ನಡೆಸಿದವರ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಪೋಸ್ಟ್ ಹಾಕಿದ್ದ ಸುರೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೈಸೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

You may also like