Home » Prayagraj: ಮಾಗಿ ಪೂರ್ಣಿಮೆ: ಇಂದು 5ನೇ ಪುಣ್ಯಸ್ನಾನ

Prayagraj: ಮಾಗಿ ಪೂರ್ಣಿಮೆ: ಇಂದು 5ನೇ ಪುಣ್ಯಸ್ನಾನ

0 comments

Prayagraj: ಮಹಾಕುಂಭ ಮೇಳವು ಫೆ.26 ರಂದು ಮಹಾ ಶಿವರಾತ್ರಿಯಂದು ʼಪವಿತ್ರ ಸ್ನಾನʼ ಮಾಡುವುದರೊಂದಿಗೆ ಕೊನೆಗೊಳ್ಳಲಿದೆ. ಮಹಾ ಕುಂಭ ಮೇಳ ಸಮಾರೋಪಕ್ಕೆ ಇನ್ನೂ ಕೇವಲ ಹದಿನೈದು ದಿನ ಮಾತ್ರ ಬಾಕಿ ಇದೆ. ಮಹಾಕುಂಭ ಮೇಳದಲ್ಲಿ ಐದನೇ ಪುಣ್ಯಸ್ನಾನ ಇಂದು (ಬುಧವಾರ) ನಡೆಯಲಿದ್ದು, ಕೋಟ್ಯಾಂತರ ಭಕ್ತರು ಸೇರಿದ್ದಾರೆ. ಜನದಟ್ಟಣೆ ಆಗುವ ಹಿನ್ನೆಲೆಯಲ್ಲಿ ಮೊನ್ನೆ 300ಕಿ.ಮೀ.ವರೆಗೂ ವಾಹನಗಳು 12 ಗಂಟೆಗಳ ಕಾಲ ಸಂಚರಿಸಲಾಗದೆ ರಸ್ತೆ ಮಧ್ಯೆ ಸಿಲುಕಿದ ಕಾರನ ಪ್ರಯಾಗ್‌ರಾಜ್‌ನಲ್ಲಿ ವಾಹನ ನಿಷೇಧ ವಲಯ ಘೋಷಿಸಲಾಗಿದೆ.

You may also like