Home » Recharge plan: ಇಲ್ಲಿದೆ ನೋಡಿ ಹೊಸ ರಿಚಾರ್ಜ್ ಪ್ಲಾನ್! ಪ್ರತಿ ದಿನ 2ಜಿಬಿ ಡೇಟಾ, 365 ದಿನ ವ್ಯಾಲಿಟಿಡಿ!

Recharge plan: ಇಲ್ಲಿದೆ ನೋಡಿ ಹೊಸ ರಿಚಾರ್ಜ್ ಪ್ಲಾನ್! ಪ್ರತಿ ದಿನ 2ಜಿಬಿ ಡೇಟಾ, 365 ದಿನ ವ್ಯಾಲಿಟಿಡಿ!

by ಕಾವ್ಯ ವಾಣಿ
0 comments

Recharge plan: ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು, ಪ್ರತಿ ದಿನ 2ಜಿಬಿ ಉಚಿತವಾಗಿ ಸಿಗಲಿದೆ. ಜೊತೆಗೆ ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳೂ ಇವೆ. ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 365 ದಿನದ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೌದು, BSNL ಇತ್ತೀಚೆಗೆ ಮೂರು ಪ್ಲಾನ್‌ಗಳನ್ನು (₹201, ₹797, ₹2999) ನಿಲ್ಲಿಸಿದೆ. ಬದಲಾಗಿ ಹೊಸ ಪ್ಲಾನ್ (Recharge plan) ಇಲ್ಲಿದೆ. ಇದು ವರ್ಷದ ಪ್ಲಾನ್. ಅಂದರೆ ಒಮ್ಮೆ ರೀಚಾರ್ಜ್ ಮಾಡಿದರೆ 365 ದಿನ ಯಾವುದೇ ಚಿಂತೆ ಇಲ್ಲ. ಮುಖ್ಯವಾಗಿ ₹1515 ರೀಚಾರ್ಜ್ ಪ್ಲಾನ್‌ನಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ದಿನಾಲೂ 2GB ಡೇಟಾ ಸಿಗುತ್ತದೆ. ಇಷ್ಟು ಕಡಿಮೆ ಬೆಲೆಯಲ್ಲಿ ದಿನಾಲೂ 2GB ಡೇಟಾ ಕೊಡುವ ಪ್ಲಾನ್‌ಗಳಲ್ಲಿ ಇದೇ ಬೆಸ್ಟ್. ಆದರೆ ಈ ಪ್ಲಾನ್‌ನಲ್ಲಿ ಕೇವಲ ಡೇಟಾ ಮಾತ್ರ ಸಿಗುತ್ತದೆ. ಕರೆಗಳು ಮತ್ತು SMS ಇರುವುದಿಲ್ಲ. ಇದು ಕೇವಲ ಡೇಟಾ ವೋಚರ್ ಎಂದು BSNL ತಿಳಿಸಿದೆ.

ದಿನಾಲೂ 2GB ಡೇಟಾ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 40 kbpsಗೆ ಇಳಿಯುತ್ತದೆ. ದಿನಾಲೂ ಕೇವಲ ₹4ಕ್ಕೆ ಈ ಸೌಲಭ್ಯ ಸಿಗುತ್ತದೆ. ಈ ಪ್ಲಾನ್‌ನಲ್ಲಿ ಒಟ್ಟು 730GB ಫಾಸ್ಟ್ ಇಂಟರ್ನೆಟ್ ಜೊತೆಗೆ 40 kbpsನಲ್ಲಿ ಅನ್‌ಲಿಮಿಟೆಡ್ ಡೇಟಾ ಸಿಗುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗಾಗಿ ಈ ಪ್ಲಾನ್‌ ತಂದಿದೆ ಎಂದು ಕಂಪನಿ ತಿಳಿಸಿದೆ.

BSNLನ ₹1198 ಪ್ರಿಪೇಯ್ಡ್ ಪ್ಲಾನ್‌ನಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ತಿಂಗಳಿಗೆ 300 ನಿಮಿಷಗಳ ಉಚಿತ ಕರೆ, 3GB ಡೇಟಾ, 30 SMS ಮತ್ತು ಉಚಿತ ರೋಮಿಂಗ್ ಸಿಗುತ್ತದೆ. ತಿಂಗಳಿಗೆ ಕೇವಲ ₹100 ಕೊಟ್ಟರೆ ಸಾಕು. ಹೆಚ್ಚು ದಿನಗಳ ವ್ಯಾಲಿಡಿಟಿ ಬಯಸುವವರಿಗೆ ಮತ್ತು ಎರಡನೇ ಸಿಮ್ ಬಳಸುವವರಿಗೆ ಈ ಪ್ಲಾನ್ ಒಳ್ಳೆಯದು.

You may also like