Home » NAASA: ಸುನಿತಾ ವಿಲಿಯಮ್ಸ್ ಭೂಮಿಗಿಳಿಯಲು ಮುಹೂರ್ತ ಫಿಕ್ಸ್!!

NAASA: ಸುನಿತಾ ವಿಲಿಯಮ್ಸ್ ಭೂಮಿಗಿಳಿಯಲು ಮುಹೂರ್ತ ಫಿಕ್ಸ್!!

0 comments

NAASA: ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ. ಆದರೆ ಈಗ ಸುನಿತ ವಿಲಿಯನ್ಸ್ ಅವರು ಭೂಮಿಗಿಳಿಯಲು ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ.

ಹೌದು, ಬಾಹ್ಯಕಾಶದಲ್ಲಿ ಕೆಲವು ತಿಂಗಳಿಂದ ಸಿಲುಕಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾರ್ಚ್ 19ರಂದು ಭೂಮಿಗೆ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೆರಿಕ ಬಾಹ್ಯಕಾಶ ಸಂಸ್ಥೆ ನಾಸಾ ಮಾರ್ಚ್ 10 ಮತ್ತು 11ರಂದು ಕ್ರ್ಯೂ-10 ಕಾರ್ಯಾಚರಣೆ ಆರಂಭಿಸಲಿದ್ದು, 8 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಅವರನ್ನು ವಾಪಸ್ ಕರೆತರಲಿದೆ ಎನ್ನಲಾಗಿದೆ.

ಅಂದಹಾಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುನೀತಾ ಹಾಗೂ ಬುಚ್ ವಿಲ್ಮೋರ್ ಅವರು ವಾಪಸ್ ಕರೆತರುವಂತೆ ನಾಸಾಗೆ ಸೂಚಿಸಿದ್ದರು. ಟ್ರಂಪ್ ಆದೇಶದ ಬಳಿಕ ನಾಸಾ Crew-10 ಮೂಲಕ ಗಗನಯಾತ್ರಿಗಳನ್ನು ಕರೆತರಲು ಮುಂದಾಗಿದೆ. ಸದ್ಯದ ನಾಸಾದ ಮಾಹಿತಿ ಪ್ರಕಾರ ಮಾರ್ಚ್‌ 12ರಂದು Crew-10 ಗಗನಕ್ಕೆ ಲಾಂಚ್‌ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 25ರ ಒಳಗೆ ಸುನಿತಾ ವಿಲಿಯಮ್ಸ್ ಅವರನ್ನು ವಾಪಸ್ ಕರೆದುಕೊಂಡು ಬರಲಾಗುತ್ತಿದೆ.

ಕಳೆದ ವರ್ಷ ಜೂನ್ 5ರಂದು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆ ಐಎಸ್​ಎಸ್​ ತಲುಪಿದ್ದರು. ಮಿಷನ್​ ಒಂದು ವಾರದ ಬಳಿಕ ಅವರು ಹಿಂತಿರುಗಬೇಕಾಗಿತ್ತು. ಈ ಇಬ್ಬರು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಪರೀಕ್ಷಿಸಲು ಹೋಗಿದ್ದರು. ಆದರೆ ಕ್ಯಾಪ್ಸುಲ್​ನಲ್ಲಿ ತಾಂತ್ರಿಕ ಸಮಸ್ಯೆ ಕಂಡ ಬಂದ ಹಿನ್ನೆಲೆಯಲ್ಲಿ ಆಗಿನಿಂದಲೂ ಅವರಿಬ್ಬರೂ ಐಎಸ್‌ಎಸ್‌ನಲ್ಲಿಯೇ ಸಿಲುಕಿದ್ದರು.

You may also like