Home » Bangalore : ರಾಜ್ಯದಲ್ಲಿ ಪಿಂಕ್ ಬೈಕ್, ಮಹಿಳಾ ಪಯಣಿಗರಿಗಾಗಿ ಮಹಿಳಾ ಚಾಲಕಿಯರು

Bangalore : ರಾಜ್ಯದಲ್ಲಿ ಪಿಂಕ್ ಬೈಕ್, ಮಹಿಳಾ ಪಯಣಿಗರಿಗಾಗಿ ಮಹಿಳಾ ಚಾಲಕಿಯರು

0 comments

Bangalore: ರಾಜ್ಯದಲ್ಲಿ ಮಹಿಳೆಯರಿಗಾಗಿ ʼಪಿಂಕ್‌ʼ ಬೈಕ್‌ಗಳನ್ನು ಬಿಡುಗಡೆ ಮಾಡಲು ರ್ಯಾಪಿಡೋ ಮುಂದಾಗಿದೆ. ಬೈಕ್‌ ಟ್ಯಾಕ್ಸಿ ಅಗ್ರಿಗೇಟರ್‌ ಆಗಿರುವ ರ್ಯಾಪಿಡೋ ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಮುಂದಿನ ಕಾರ್ಯಯೋಜನೆ ಪ್ರಕಟ ಮಾಡಿದೆ. ರ್ಯಾಪಿಡೋ ಬೈಕ್‌ಗಳಲಿ ಮಹಿಳಾ ಕ್ಯಾಪ್ಟನ್‌ಗಳು ಪರಿಚಯಿಸಲಿದ್ದು, ಈ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುವುದು ನಮ್ಮ ಗುರಿ ಎಂದು ಕಂಪನಿಯ ಸಹ-ಸಂಸ್ಥಾಪಕ ಪವನ್‌ ಗುಂಟುಪಲ್ಲಿ ಹೇಳಿದ್ದಾರೆ. ಪಿಂಕ್‌ ಬೈಕ್‌ ಮೂಲಕ 25,000 ಮಹಿಳಾ ಚಾಲಕರಿಗೆ ಉದ್ಯೋಗ ನೀಡುವುದಾಗಿ ಕಂಪನಿ ಹೇಳಿದೆ. ಮಹಿಳೆ ಅಪರಿಚಿತ ಚಾಲಕನೊಂದಿಗೆ ಸುರಕ್ಷಿತವಾಗಿ ಪ್ರಯಾಣ ಮಾಡಿ, ಸುಲಭವಾಗಿ ತಲುಪಬೇಕಾದ ಸ್ಥಳ ತಲುಪಿದರೆ ಅದು ನಮ್ಮ ಯಶಸ್ಸು ಎಂದು ಗುಂಟುಪಲ್ಲಿ ಹೇಳಿದರು.

You may also like