9
Shimoga: ಖಾಸಗಿ ಆಸ್ಪತ್ರೆಯಲ್ಲಿ ಆರು ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಮೃತ ಹೊಂದಿದ ಘಟನೆಯೊಂದು ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮಾಳುರು ಗ್ರಾಮದಲ್ಲಿ ಫೆ.16ರ ಭಾನುವಾರ ಈ ಘಟನೆ ನಡೆದಿದೆ.
ಮಾಳೂರು ಗ್ರಾಮದ ಮಂಜುಳಾ (25) ಸಾವಿಗೀಡಾದ ಬಾಣಂತಿ.
ಹೆರಿಗೆಯಾಗಿ ಆರು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಮೃತ ಹೊಂದಿದ್ದಾರೆ. ಒಂದು ವರ್ಷದ ಹಿಂದೆ ಮಂಜುಳಾ ಮದುವೆಯಾಗಿದ್ದು, ಫೆ.9 ರಂದು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.10 ರಂದು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ನಂತರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು ಎಂದು ವರದಿಯಾಗಿದೆ.
