Pavitra Gowda : ಇಂದು ನಟ ದರ್ಶನ್ ಹುಟ್ಟು ಹಬ್ಬ. ಈ ಹಿನ್ನಲೆಯಲ್ಲಿ ಪವಿತ್ರಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.
ಹೌದು, ಜೈಲಿನಿಂದ ಬಿಡುಗಡೆಯದ ಬಳಿಕ ಪವಿತ್ರ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಹೊಸ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಇಂದು ದರ್ಶನ್ ಹುಟ್ಟು ಹಬ್ಬದ ದಿನದಂದೇ ಲವ್ ಯೂ ಅಂತ ಪೋಸ್ಟರ್ನಲ್ಲಿ ಬಡೆದುಕೊಂಡಿದ್ದಾರೆ. ಹೀಗೆ ಬರೆದುಕೊಂಡಿರುವುದು ಬೇರೆ ಯಾರಿಗೂ ಅಲ್ಲ, ಅವರ ಅಮ್ಮಗೆ. ಐ ಲವ್ ಯು ಅಮ್ಮ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲು ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಬಿಡುಗಡೆಯಾದ ಮೇಲೆ ಅವರಿಬ್ಬರು ಹೊರಗಡೆ ಭೇಟಿ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ, ಇಂದಿನ ಪವಿತ್ರಾ ಗೌಡ ಪೋಸ್ಟರ್ ಮಾತ್ರ ಭಾರೀ ಸಖತ್ ಸದ್ದು ಮಾಡುತ್ತಿದೆ.
