Home » Pune: ಪರೀಕ್ಷೆಗೆ ತಡವಾಗಿದ್ದಕ್ಕೆ ಪ್ಯಾರಾಗ್ಲೈಡ್‌ನಲ್ಲಿ ಬಂದಿಳಿದ ವಿದ್ಯಾರ್ಥಿ!

Pune: ಪರೀಕ್ಷೆಗೆ ತಡವಾಗಿದ್ದಕ್ಕೆ ಪ್ಯಾರಾಗ್ಲೈಡ್‌ನಲ್ಲಿ ಬಂದಿಳಿದ ವಿದ್ಯಾರ್ಥಿ!

0 comments

Pune: ಮಹಾರಾಷ್ಟ್ರದ ಸತಾರಾ ಜಿಲ್ಲೆಯ 20 ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಸಕಾಲಕ್ಕೆ ತಲುಪಲು ಪ್ಯಾರಾಗ್ಲೈಡ್‌ ಮೂಲಕ ವಾಯುಮಾರ್ಗದಲ್ಲಿ ಬಂದ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಬಿ.ಕಾಂ. ಮೊದಲ ವರ್ಷದ ಪದವಿ ತರಗತಿಯಲ್ಲಿ ಓದುತ್ತಿರುವ ಸಮರ್ಥ್‌ ಮಹಾಂಗ್ಡೆ ಎನ್ನುವಾತನೇ ಈ ಕೆಲಸ ಮಾಡಿದ್ದು.

ಕಳೆದ ಡಿ.15 ರಂದು ಪಸರಾನಿ ಗ್ರಾಮದ ನಿವಾಸಿಯಾದ ಸಮರ್ಥ್‌ ನೈಸರ್ಗಿಕ ವಿಪತ್ತು ನಿರ್ವಹಣೆಯ ವಿಷಯ ಕುರಿತ ಪರೀಕ್ಷೆ ತಡವಾಗಿದ್ದಕ್ಕೆ ತಾನಿದ್ದ ಪ್ರದೇದಲ್ಲಿ ಕಾರ್ಯನಿರ್ವಹಿಸುವ ಹ್ಯಾರಿಸನ್‌ ಪೊಲಿ ಪ್ಯಾರಾಗ್ಲೈಡ್‌ನ ನೆರವನ್ನು ಪಡೆದು ಸುಮಾರು 12 ಕೀ.ಮೀ. ದೂರದಲ್ಲಿರುವ ಕಿಸಾನ್ವೀರ್‌ ಕಾಲೇಜಿಗೆ ಬಂದಿದ್ದಾನೆ.

“ಹ್ಯಾರಿಸನ್‌ ಪೊಲಿ ಎಂಬ ಪ್ಯಾರಾಗ್ಲೈಡ್‌ ಸಂಸ್ಥೆ ಬಳಿ ಇರುವ ಕಬ್ಬಿನಹಾಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಮಧ್ಯಾಹ್ನ 2.15 ಕ್ಕೆ ಪರೀಕ್ಷೆಗೆ ಸಮಯ ನಿಗದಿಯಾಗಿತ್ತು. ಆದರೆ ಇದು ನೆನಪಾಗುವಾಗ 2ಗಂಟೆಯಾಗಿತ್ತು. ರಸ್ತೆ ಮೂಲಕ ಸಕಾಲಕ್ಕೆ ತಲುಪಲು ಸಾಧ್ಯವಿಲ್ಲ ಎನ್ನುವ ಅರಿವಿಗೆ ಬಂತು. ಹಾಗಾಗಿ ಅಲ್ಲಿಯೇ ಇದ್ದ ಪ್ಯಾರಾಗ್ಲೈಡಿಂಗ್‌ ತಜ್ಞ ಗೋವಿಂದ್‌ ಯೆವಾಲ್‌ ಅವರ ನೆರವನ್ನು ಪಡೆದೆ. ಎಲ್ಲಾ ರೀತಿಯ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡೇ ಪ್ಯಾರಾಗ್ಲೈಡ್‌ ಏರಿದ್ದೆ. ಕೇವಲ ಐದು ನಿಮಿಷಗಳಲ್ಲಿ ಕಾಲೇಜಿನ ಮೈದಾನದಲ್ಲಿ ಬಂದು ಇಳಿದೆ” ಎಂದು ಸಮರ್ಥ್‌ ಹೇಳಿದ್ದಾನೆ.

You may also like