7
Bantwal: ಫರಂಗಿಪೇಟೆಯಲ್ಲಿ ವ್ಯಕ್ತಿಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 16ರಂದು ನಡೆದಿದೆ.
ಬಂಟ್ವಾಳ (Bantwal) ಪುದು ಗ್ರಾಮದ ಕುಂತ್ಕಳ ನಿವಾಸಿ ನಿತ್ಯಾನಂದ (65) ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಅವರು 10 ವರ್ಷಗಳಿಂದ ಕೆಲಸ ಮಾಡದೆ ವಿಪರೀತ ಕುಡಿತದ ಚಟ ಹೊಂದಿದ್ದರು. ಫೆ. 16ರಂದು ಕೂಡ ಮಧ್ಯಾಹ್ನ ಮದ್ಯ ಸೇವಿಸಿ ಬಂದು ನದಿಗೆ ಹಾರಿದ್ದಾರೆ. ಅದನ್ನು ಕಂಡು ಸ್ಥಳೀಯ ದೋಣಿಯವರು ರಕ್ಷಿಸಲು ಪ್ರಯತ್ನಿಸಿದ್ದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರ ಪುತ್ರ ಧನಂಜಯ ದೂರಿನಲ್ಲಿ ತಿಳಿಸಿದ್ದಾರೆ.
