10
Mysore: ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಸಿಸಿಬಿ ಪೊಲೀಸರು ಗುರುವಾರ ಮೌಲ್ವಿ ಮುಫ್ತಿಯನ್ನು ಗಲಾಟೆ ನಡೆದು ಬರೋಬ್ಬರಿ 11 ದಿನಗಳ ಬಳಿಕ ಬಂಧನ ಮಾಡಿದ್ದಾರೆ.
ಈತನ ಬಂಧನಕ್ಕೆ ಸಾರ್ವಜನಿಕರ ಹಾಗೂ ಪ್ರತಿಪಕ್ಷಗಳ ಒತ್ತಡವು ಹೆಚ್ಚಾಗಿತ್ತು. ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು ಕಲ್ಲು ತೂರಾಟ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸದೇ ಇರುವ ಸರಕಾರದ ನಡೆಯನ್ನು ಖಂಡಿಸಿದ್ದು, ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ತಾಲಿಬಾನಿಗೆ ಹೋಲಿಕೆ ಮಾಡಿದ್ದರು.
