Home » Rekha Gupta : ಮೈಕ್, ಪೋಡಿಯಂ ಅನ್ನು ಕಿತ್ತೆಸೆದು ಜಗಳಕ್ಕೆ ನಿಂತ ದೆಹಲಿ ನೂತನ ಸಿಎಂ ರೇಖಾ ಗುಪ್ತಾ – ರೌದ್ರಾವತಾರದ ವಿಡಿಯೋ ವೈರಲ್

Rekha Gupta : ಮೈಕ್, ಪೋಡಿಯಂ ಅನ್ನು ಕಿತ್ತೆಸೆದು ಜಗಳಕ್ಕೆ ನಿಂತ ದೆಹಲಿ ನೂತನ ಸಿಎಂ ರೇಖಾ ಗುಪ್ತಾ – ರೌದ್ರಾವತಾರದ ವಿಡಿಯೋ ವೈರಲ್

0 comments

Rekha Gupta: ದೆಹಲಿಯ ನೂತನ ಸಿಎಂ ಆಗಿ ಬಿಜೆಪಿಯ ರೇಖಾ ಗುಪ್ತ ಇವರು ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ರೇಖಾ ಗುಪ್ತಾ ಅವರು ಮೈಕ್, ಪೋಡಿಯಂಗಳನ್ನು ಕಿತ್ತೆಸೆದು ಜಗಳಕ್ಕೆ ನಿಂತ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು,ಅಳೆದು ತೂಗಿ ನಿನ್ನೆಯಷ್ಟೇ ಹೊಸ ಸಿಎಂ ಹೆಸರು ಘೋಷಣೆ ಮಾಡಿದ್ದಾರೆ ಬಿಜೆಪಿ ನಾಯಕರು. ಇದೇ ಸಮಯದಲ್ಲಿ, ದೆಹಲಿಯ ಹೊಸ ಸಿಎಂ ರೌದ್ರಾವತಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರೇಖಾ ಗುಪ್ತಾ ಮೈಕ್ ಕಿತ್ತು ಎಸೆದು ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳು ಇವೆ.

ಈ ವಿಡಿಯೊದಲ್ಲಿ ರೇಖಾ ಗುಪ್ತಾ ಈ ಹಿಂದೆ ನಡೆದಿದ್ದ ಮೇಯರ್‌ ಚುನಾವಣೆಯಲ್ಲಿ ಸೋತ ಬಳಿಕ ಅಲ್ಲಿದ್ದ ಪೋಡಿಯಂ ಹಾಗೂ ಮೈಕ್‌ ಅನ್ನು ಕೋಪದಲ್ಲಿ ಕಿತ್ತು ಬಿಸಾಡಿದ್ದರು. ಈ ವಿಡಿಯೊ ಈಗ ವೈರಲ್‌ ಆಗುತ್ತಿದ್ದು, ರೇಖಾ ಗುಪ್ತ ವಿರುದ್ಧ ಟೀಕೆಗಳೂ ಸಹ ಆರಂಭವಾಗಿವೆ.

You may also like