1
Death: ತೆಂಗಿನಮರ ಹತ್ತಿ ತೆಂಗಿನಕಾಯಿ ಕೀಳುತ್ತಿರುವಾಗ ದುರಾದೃಷ್ಟವಶಾತ್ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ಆಯ ತಪ್ಪಿ ಮರದಿಂದ ಬಿದ್ದು ವ್ಯಕ್ತಿಯೋರ್ವರು ನಿಧನರಾದ (death) ಘಟನೆ ಕೊಲ್ಲೂರಿನ ಹೆಗ್ಗಡೆಹಕ್ಲುವಿನಲ್ಲಿ ನಡೆದಿದೆ.
ಬೈಂದೂರಿನ ಕಾಲ್ತೋಡು ಗ್ರಾಮದ ರಾಮ ಅವರು ಆಯ ತಪ್ಪಿ ಬಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅಸುನೀಗಿದ್ದಾರೆ. ಇವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
