2
Hyderabad: ವನಪರ್ತಿ ಜಿಲ್ಲೆಯ ಕೊಣ್ಣೂರಿನಲ್ಲಿರುವ ಕೋಳಿ ಸಾಕಾಣಿಕಾ ಕೇಂದ್ರದಲ್ಲಿ ಮೂರು ದಿನದ ಅಂತರದಲ್ಲಿ ಬರೋಬ್ಬರಿ 2500 ಕೋಳಿಗಳು ಸಾವಿಗೀಡಾಗಿದೆ. ಫೆ.16-18 ರ ಅವಧಿಯಲ್ಲಿ 2500 ಕೋಳಿಗಳ ಹಠಾತ್ ಸಾವಿಗೆ ಕಾರಣ ಏನು ಎನ್ನುವ ಕುರಿತು ಈ ವರೆಗೂ ಮಾಹಿತಿ ಲಭ್ಯವಾಗಿಲ್ಲ. ಇದು ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಸೃಷ್ಟಿ ಉಂಟು ಮಾಡಿದೆ.
ಜಿಲ್ಲಾ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು, ತನಿಖೆಯ ಭಾಗವಾಗಿ ಸತ್ತಿರುವ ಕೋಳಿಗಳ ಮಾದರಿಗಳನ್ನು ಸಂಗ್ರಹ ಮಾಡಿ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾಂಕ್ರಾಮಿಕ ರೋಗದಿಂದ ಈ ಕೋಳಿಗಳು ಸಾವಿಗೀಡಾದ ಕುರಿತು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಅಧಿಕೃತ ವರದಿ ಬರಬೇಕಷ್ಟೇ. ರೋಗದ ಕುರಿತು ತಿಳಿಯುವವರೆಗೂ ಕೋಳೆ ಸಾಕಾಣೆದಾರರು ಎಚ್ಚರ ವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.
