7
Mysore: ಸಂಸದ ಮತ್ತು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರ ಎರಡನೇ ಪುತ್ರನ ನಾಮಕರಣ ಶಾಸ್ತ್ರ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಫೆ.19 ರಂದು ನಡೆದಿದೆ.
ಯದುವಂಶದ ಪರಂಪರೆಯ ರೀತಿಯಲ್ಲಿ ಎರಡನೇ ಮಗುವಿಗೆ ಯುಗಾಧ್ಯಕ್ಷ ಕೃಷ್ಣರಾಜ್ ಒಡೆಯರ್ ಎಂದು ನಾಮಕಾರಣ ಮಾಡಲಾಗಿದೆ.
ಅರಮನೆಯ ಕನ್ನಡಿ ತೊಟ್ಟಿಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.
ಅ.11,2024 ರಂದು ಸಂಸದ ಯದುವೀರ್ ಒಡೆಯರ್ ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಆಯುಧ ಪೂಜೆ ನೆರವೇರಿಸಿ ಕಂಕಣ ವಿಸರ್ಜನೆ ಮಾಡಿದ್ದು, ಅಂದೇ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಗಂಡು ಮಗುವಿಗೆ ಜನ್ಮ ನೀಡಿದ್ದರು.
ನಾಮಕರಣ ಶಾಸ್ತ್ರವು ರಾಜವಂಶಸ್ಥರ ಖಾಸಗಿ ಕಾರ್ಯಕ್ರಮವಾಗಿದ್ದು, ಕೆಲವೇ ಸಂಬಂಧಿಕರಿಗೆ ಮಾತ್ರ ಆಹ್ವಾನವಿತ್ತು.
