Home » Shivaraj Singh Chouhan: ಮುರಿದ ಸೀಟ್‌ ನೀಡಿದ್ದೀರಿ-ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಆಕ್ರೋಶ!

Shivaraj Singh Chouhan: ಮುರಿದ ಸೀಟ್‌ ನೀಡಿದ್ದೀರಿ-ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಆಕ್ರೋಶ!

0 comments

Shivaraj Singh Chouhan: ಏರ್‌ಇಂಡಿಯಾದ ಕೆಟ್ಟ ಸೇವೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆಕ್ರೋಶಗೊಂಡಿದ್ದಾರೆ. ದೆಹಲಿಗೆ ಪ್ರಯಾಣಿಸುವ ವೇಳೆ ಮುರಿದ ಸೀಟ್‌ನಲ್ಲಿಯೇ ಪ್ರಯಾಣ ಮಾಡಿದ್ದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

ನೀವು ಗ್ರಾಹಕರಿಗೆ ಮೋಸ ಮಾಡುತ್ತಿದ್ದೀರಿ. ಟಿಕೆಟ್‌ಗೆ ಪೂರ್ಣ ಶುಲ್ಕ ವಿಧಿಸಿದ ನಂತರ ಕೆಟ್ಟು ಹೋದ ಸೀಟ್‌ ಮೇಲೆ ಕುಳಿತುಕೊಳ್ಳುವಂತೆ ಹೇಳುವುದು ಎಷ್ಟು ನೈತಿಕ? ಇದು ಪ್ರಯಾಣಿಕರಿಗೆ ಮಾಡುವ ಮೋಸ ಎಂದು ಹೇಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವರಾಜ್‌ಸಿಂಗ್‌ ಅವರ ಪೋಸ್ಟ್‌ ಪ್ರಕಟವಾದ ನಂತರ ಏರ್‌ಇಂಡಿಯಾ ಕ್ಷಮೆಯಾಚನೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸುವುದಿಲ್ಲ ಎಂದು ಹೇಳಿದೆ.

You may also like