3
RRTS: ದೆಹಲಿ-ಮೇರಠ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ದೆಹಲಿ ರಸ್ತೆಯಲ್ಲಿರುವ 150 ವರ್ಷ ಹಳೆಯ ಮಸೀದಿಯನ್ನು ಕೆಡವಲಾಗಿದೆ.
ಆರ್‌ಆರ್‌ಟಿಎಸ್ ಕಾರಿಡಾರ್ ನಿರ್ಮಾಣ ಮಾಡುತ್ತಿರುವ ಮಾರ್ಗಮಧ್ಯದಲ್ಲಿ ಮಸೀದಿ ಇತ್ತು. ಇದು ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗುತ್ತಿದ್ದ ಕಾರಣ ಮಸೀದಿಯನ್ನು ಕೆಡವಲಾಗಿದೆ.
ಮುಸ್ಲಿಮರೇ ಮುಂದೆ ನಿಂತು ಕೆಡವಲು ಕೈ ಜೋಡಿಸಿದ್ದು, ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲ ಮ್ಯಾಜಿಸ್ಟ್ರೇಟ್ ಬ್ರಿಜೇಶ್ ಕುಮಾರ್‌ಸಿಂಗ್, ಮುಸ್ಲಿಮರ ಸಂಪೂರ್ಣ ಒಪ್ಪಿಗೆಯನ್ನು ಪಡೆದು ಮಸೀದಿಯನ್ನು ಕೆಡವಲಾಗಿದ ಎಂದು ಹೇಳಿದ್ದಾರೆ.
