5
Chikkaballapura : ಚಿಕ್ಕ ಮಕ್ಕಳನ್ನು ಎಷ್ಟು ಜಾಗೃತಿ ಮಾಡಿದರು ಕೂಡ ಇಂದು ಅಚಾನಕ್ಕಾಗಿ ಕೆಲವೊಂದು ದುರ್ಘಟನೆಗಳು ನಡೆದು ಬಿಡುತ್ತವೆ. ಅಂತೆಯೇ ಇದೀಗ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗುವೊಂದು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಅಲ್ಲದೇ ಮಗುವಿನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಇಂದು ಮನೆಯ ಮುಂದೆ ಇದ್ದಂತ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಪೃಥ್ವಿರಾಜ್(3) ಎಂಬ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನೂ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
15 ದಿನಗಳ ಹಿಂದಷ್ಟೇ ತಾಯಿ ಮೋನಿಕಾ ಅವರು ತಮ್ಮ ಮಗನನ್ನು ಕರೆದುಕೊಂಡು ಮತ್ತೊಂದು ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಈ ವೇಳೆ ಇಂತಹ ದುರ್ಘಟನೆ ನಡೆದಿರುವುದು ದುರಾದೃಷ್ಟಕರ.
