Home » Viral Video : ಬರ್ತ್ ಡೇ ಪಾರ್ಟಿಯಲ್ಲಿ ಸ್ಪೋಟಗೊಂಡ ಬಲೂನ್ – ಯುವತಿಯ ಸ್ಥಿತಿ ಗಂಭೀರ

Viral Video : ಬರ್ತ್ ಡೇ ಪಾರ್ಟಿಯಲ್ಲಿ ಸ್ಪೋಟಗೊಂಡ ಬಲೂನ್ – ಯುವತಿಯ ಸ್ಥಿತಿ ಗಂಭೀರ

0 comments

Viral Video : ಸಾಮಾನ್ಯವಾಗಿ ಬರ್ತಡೆ ಮಾಡುವಂತಹ ಸಂದರ್ಭದಲ್ಲಿ ಅಲಂಕಾರದಲ್ಲಿ ಪ್ರಮುಖ ಪಾತ್ರ ವಹಿಸುವುದು ಬಲೂನ್ಗಳು. ಬಲೂನ್ ಇಲ್ಲದೆ ಇಂದು ಹುಟ್ಟು ಹಬ್ಬದ ಆಚರಣೆಗಳೆ ನಡೆಯುವುದಿಲ್ಲ ಎನ್ನುವಂತಾಗಿದೆ. ಆದರೆ ಇದೀಗ ಅಚ್ಚರಿ ಎಂಬಂತೆ ಯುವತಿ ಒಬ್ಬಳ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಬಲೂನ್ ಒಂದು ಸ್ಫೋಟಗೊಂಡು ಯುವತಿಯ ಸ್ಥಿತಿ ಚಿಂತಾ ಜನಕವಾಗಿದೆ.


ಹೌದು, ವಿಯೆಟ್ನಾಂನ ಹನೋಯಿಯಲ್ಲಿ ಬರ್ತ್​ಡೇ ಪಾರ್ಟಿಯಲ್ಲಿ ಹೈಡ್ರೋಜನ್ ಬಲೂನ್​ಗಳು ಸ್ಫೋಟಗೊಂಡ ಪರಿಣಾಮ ಮಹಿಳೆಯ ಮುಖ ಸುಟ್ಟಿ ಹೋಗಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ.

ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಒಂದು ಕೈನಲ್ಲಿ ಕೇಕ್​ ಮತ್ತೊಂದು ಕೈನಲ್ಲಿ ಬಲೂನ್​ಗಳನ್ನು ಹಿಡಿದುಕೊಂಡಿರುವ ಯುವತಿ ಕ್ಯಾಂಡಲ್ ಊದಲು ಮುಂದಾಗುತ್ತಾರೆ. ಈ ವೇಳೆ ಹೈಡ್ರೋಜನ್ ಬಲೂನ್​ಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಸ್ಫೋಟಗೊಂಡಿದೆ. ಬೆಂಕಿಯು ಯುವತಿ ಮುಖಕ್ಕೆ ತಗುಲಿದ್ದು, ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಮಾತನಾಡಿರುವ ವೈದ್ಯರೊಬ್ಬರು, ಯುವತಿ ಗಿಯಾಂಗ್​ ಮುಖಕ್ಕೆ ಬೆಂಕಿ ತಗುಲಿದ್ದು, ಆಕೆಯ ಮುಖದ ಮೇಲೆ ಕೆಲವು ತಿಂಗಳು ಸುಟ್ಟ ಕಲೆಗಳು ಇರುತ್ತವೆ. ಆಕೆ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ.

You may also like