3
Elon Musk: ಅಮೆರಿಕದ ಯಾವುದೇ ಫೆಡರಲ್ ಉದ್ಯೋಗಿ ತನ್ನ ಒಂದು ವಾರದ ಕೆಲಸದ ವಿಸ್ತ್ರತ ವರದಿಯನ್ನು ಒಪ್ಪಿಸದಿದ್ದರೆ ಕೆಲಸದಿಂದ ವಜಾ ಮಾಡಲಾಗುವುದು ಎಂದು ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸರಕಾರಿ ದಕ್ಷತಾ ಇಲಾಖೆ (ಡಿಒಜಿಇ) ಶನಿವಾರ ಎಚ್ಚರಿಕೆ ನೀಡಿದೆ.
ಫೆಡರಲ್ ಉದ್ಯೋಗಿ ಪಡೆಯನ್ನು ಮರು ರೂಪಿಸಲು ಡಿಒಜಿಇ ಆಕ್ರಮಣಕಾರಿ ಧೋರಣೆ ತಳೆಯಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಹೊಸ ನಿರ್ದೇಶನವನ್ನು ನೀಡಿದ್ದಾರೆ.
ಹಿಂದಿನ ವಾರದ ಕೆಲಸದ ವಿವರಗಳನ್ನು ಸಲ್ಲಿಸಲು ಎಲ್ಲ ಫೆಡರಲ್ ಉದ್ಯೋಗಿಗಳಿಗೆ ಇಮೇಲ್ ಮಾಡಲಾಗುವುದು. ಇದಕ್ಕೆ ಉತ್ತರ ನೀಡಲು ವಿಫಲರಾದರೆ ಆಯಾ ಉದ್ಯೋಗಿಯ ರಾಜೀನಾಮೆಯೆಂದು ಪರಿಗಣಿಸಲಾಗುವುದು ಎಂದು ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಮಸ್ಕ್ ಎಚ್ಚರಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಸೂಚನೆಯನ್ನು ನಿರ್ಲಕ್ಷಿಸಿ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರು ಎಫ್‌ಬಿಐ ಸಿಬ್ಬಂದಿ ಸೂಚಿಸಿದ್ದಾರೆ ಎನ್ನಲಾಗಿದೆ.
