6
Kottigehara: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಮೂಲದ ಕುಮಾರ್ ಎಂಬ ವ್ಯಕ್ತಿ ರಸ್ತೆ ಮಧ್ಯೆ ಅಸ್ವಸ್ಥನಾಗಿ ಬಿದ್ದಿರುವ ಘಟನೆ ನಡೆದಿದೆ.
ಯಾತ್ರೆ ಸಂದರ್ಭ ರಕ್ತವಾಂತಿ ಮಾಡಿದ ಕುಮಾರ್ ಪ್ರಜ್ಞೆ ತಪ್ಪಿದ್ದು, ಇದನ್ನು ಕಂಡ ಸ್ಥಳೀಯರು ಕೂಡಲೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು.
ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಯಾತ್ರಿಕರ ಆರೋಗ್ಯ ಕಾಳಜಿ ಮುಖ್ಯ ಎನ್ನುವ ಕುರಿತು ಒತ್ತಿ ಒತ್ತಿ ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಮಾನವೀಯತೆಯನ್ನು ಮೆರೆದ ಸ್ಥಳೀಯರು ಹಾಗೂ ಆರೀಫ್ ಅವರ ಸಹಾಯವನ್ನು ಶ್ಲಾಘಿಸಲಾಗಿದೆ.
