Chennai: ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
#JUSTIN புத்தக திருவிழாவில் நடனமாடியவர் மயங்கி விழுந்து உயிரிழப்பு
கலைநிகழ்ச்சியில் பங்கேற்று நடனமாடிய அகிலாண்டபுரத்தை சேர்ந்த ராஜேஸ் கண்ணன் உயிரிழப்பு#Sivaganga #Death #News18Tamilnadu | https://t.co/3v5L32pe7b pic.twitter.com/ycVcczYj3C
— News18 Tamil Nadu (@News18TamilNadu) February 22, 2025
ತಮಿಳುನಾಡಿನ ಶಾಲೆಯೊಂದರಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಿದ್ದು, ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ವೇದಿಕೆಯಲ್ಲಿ ನಡೆಯುತ್ತಿತ್ತು. ಈ ವೇಳೆ ನೃತ್ಯ ತಂಡದ ಜೊತೆ ರಾಜೇಶಕಣ್ಣನ್ ನೃತ್ಯ ಮಾಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿ ಪರಿಶೀಲನೆ ಮಾಡಿದ ವೈದ್ಯರು ರಾಜೇಶಕಣ್ಣನ್ ಮೃತ ಹೊಂದಿರುವುದಾಗಿ ಘೋಷಿಸಿದ್ದಾರೆ.
