6
Kadaba: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯ ಮಾವಿಕಟ್ಟೆ ಎಂಬಲ್ಲಿ ಹಲವರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಸೋಮವಾರ ಬೆಳಗ್ಗೆ ೧೦.೩೦ರ ವೇಳೆಗೆ ಹೆಜ್ಜೇನು ದಾಳಿ ನಡೆಸಿದೆ. ಮಾವಿಕಟ್ಟೆಯ ಸಮೀಪದ ಮರದಲ್ಲಿನ ಹೆಜ್ಜೇನು ಗೂಡಿಗೆ ಹಕ್ಕಿ ಅಥವಾ ಗಿಡುಗ ಬಡಿದಿರುವುದರಿಂದ ಹೆಜ್ಜೇನುಗಳು ಹೊರಬಂದು ಜನರ ಮೇಲೆ ದಾಳಿ ನಡೆಸಿದ್ದು, ಅಲ್ಲೇ ಸಮೀಪದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರ ಹಾಗೂ ಮನೆಯಲ್ಲಿದ್ದವರ ಮೇಲೂ ದಾಳಿ ನಡೆಸಿದೆ. ಪರಿಣಾಮ ಕೆಲವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತಸೆ ಪಡೆದುಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸುಂದರ, ನಾರಾಯಣ ಮತ್ತಿತರರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
