Home » Pune: ಮಹಿಳಾ ಸಾಫ್ಟ್‌ವೇರ್‌ ಮುಂದೆ ಹಸ್ತಮೈಥುನ ಮಾಡಿಕೊಂಡ ಕ್ಯಾಬ್‌ ಚಾಲಕ

Pune: ಮಹಿಳಾ ಸಾಫ್ಟ್‌ವೇರ್‌ ಮುಂದೆ ಹಸ್ತಮೈಥುನ ಮಾಡಿಕೊಂಡ ಕ್ಯಾಬ್‌ ಚಾಲಕ

0 comments

Pune: ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ 20 ವರ್ಷದ ಕ್ಯಾಬ್‌ ಚಾಲಕ ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಮುಂದೆ ಹಸ್ತಮೈಥುನ ಮಾಡಿ, ಅಸಭ್ಯವಾಗಿ ವರ್ತಿಸಿದ್ದಾನೆ.

ಕಲ್ಯಾಣಿ ನಗರದ ಕಂಪನಿಯ ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಫೆ.21 ರಂದು ಸಂಜೆ 7.30 ಕ್ಕೆ  ಪ್ರಯಾಣ ಮಾಡಲು ಕ್ಯಾಬ್‌ ಬುಕ್‌ ಮಾಡಿದ್ದು, ಸಂಗಮವಡಿ ರಸ್ತೆಯಲ್ಲಿ ಆಕೆಯನ್ನು ಕರೆದೊಯ್ಯಲು ಕ್ಯಾಬ್‌ ಬಂದಿತ್ತು. ಆರೋಪಿ ಚಾಲಕ ಹಿಂಬದಿಯ ಕನ್ನಡಿಯ ಮೂಲಕ ಸಂತ್ರಸ್ತೆಯನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳಲು ಆರಂಭ ಮಾಡಿದ್ದಾನೆ. ಯುವತಿ ಇದನ್ನು ಕಂಡು ಭಯಭೀತಳಾಗಿ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿದ್ದಾಳೆ.

ಖಡ್ಕಿ ಪೊಲೀಸರು 20 ವರ್ಷದ ಕ್ಯಾಬ್‌ ಚಾಲಕ ಆರೋಪಿ ಸುಮಿತ್‌ ಕುಮಾರ್‌ ಉತ್ತರ ಪ್ರದೇಶದ ಉನ್ನಾವೊದವನವಾಗಿದ್ದು ಬಂಧನ ಮಾಡಿದ್ದಾರೆ. ಕೆಲಸಕ್ಕೆಂದು ಮುಂಬೈನಿಂದ ಪಿಂಪ್ರಿ-ಚಿಂಚ್‌ವಾಡಕ್ಕೆ ಬಂದಿದ್ದ.

You may also like