Home » DV Sadananda gowda: ಹೊಸ ವಿವಿಗಳನ್ನು ಮುಚ್ಚಬಾರದು: ಮಾಜಿ ಸಿಎಂ ಡಿ ವಿ ಸದಾನಂದ ಗೌಡ

DV Sadananda gowda: ಹೊಸ ವಿವಿಗಳನ್ನು ಮುಚ್ಚಬಾರದು: ಮಾಜಿ ಸಿಎಂ ಡಿ ವಿ ಸದಾನಂದ ಗೌಡ

by ಕಾವ್ಯ ವಾಣಿ
0 comments
Sadananda Gowda

DV Sadananda gowda: ಶ್ರೀ ಶಾರದ ಪ್ರೌಢಶಾಲೆ ವಿಸ್ತೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ

ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದ ಗೌಡ (DV Sadananda gowda) ಅವರು, ಹೊಸ ವಿವಿಗಳನ್ನ ಮುಚ್ಚಬಾರದು, ಯಾರ ಕಾಲಘಟ್ಟದಲ್ಲಿ ಅನುಷ್ಠಾನವಾಯಿತೋ, ಅವರು ಮಾಡಿರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿಮಾಡಿ ಮುಂದುವರೆಸಬೇಕು ಎಂದು ಹೇಳಿದರು.

ಅದಲ್ಲದೆ ಆವತ್ತು ಕೂಡಾ ಪೂರ್ವಾಲೋಚನೆ ಇಲ್ಲದೆ, ಎಲ್ಲಾ ವಿಚಾರಗಳನ್ನ ಅಧ್ಯಯನ ಮಾಡದೆ, ಹಣಕಾಸು ವ್ಯವಸ್ಥೆ ಒದಗಿಸದೆ, ಅಧ್ಯಾಪಕರ ಕೊರತೆ ಸರಿದೂಗಿಸದೆ ಹೊಸ 9 ವಿವಿಗಳನ್ನ ಪ್ರಾರಂಭ ಮಾಡಲಾಗಿದೆ. ಹೀಗಾಗಿ, ಅಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ವಿವಿಯನ್ನ ಮುಚ್ಚುವುದು ಪರಿಹಾರವಲ್ಲ, ತೊಂದರೆಗಳನ್ನ ಸರಿಮಾಡಿ, ಅದಕ್ಕೆ ಆರ್ಥಿಕ ಸಹಕಾರಗಳನ್ನ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

You may also like