Home » Love Jihad: ಹಿಂದೂ ಯುವತಿಯನ್ನು ಪುಸಲಾಯಿಸಿ ಎರಡನೇ ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ

Love Jihad: ಹಿಂದೂ ಯುವತಿಯನ್ನು ಪುಸಲಾಯಿಸಿ ಎರಡನೇ ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ

0 comments
Love Jihad in Uttarpradesh

Dharawad: ಮುಸ್ಲಿಂ ವ್ಯಕ್ತಿಯೋರ್ವ ಈಗಾಗಲೇ ಮದುವೆಯಾಗಿ 3 ಮಕ್ಕಳನ್ನು ಹೊಂದಿದ್ದು, ನಂತರ ಹಿಂದೂ ಯುವತಿಯೊಂದಿಗೆ ಮದುವೆಯಾಗಲು ಯತ್ನಿಸಿ ಘಟನೆ ನಡೆದಿದೆ. ವಿಷಯ ತಿಳಿದ ಯುವತಿ ಮನೆಯ ಕಡೆಯವರೇ ಮದುವೆ ಆಗದ ರೀತಿಯಲ್ಲಿ ತಡೆದಿದ್ದಾರೆ.

ಆಝಾದ ನಗರದ ಜಾವೇದ್‌ ಎಂಬಾತ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಈತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಇಷ್ಟಾದರೂ ಈತ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಪುಸಲಾಯಿಸಿ ಮದುವೆಗೆ ಒಪ್ಪುವಂತೆ ಮಾಡಿದ್ದಾನೆ. ಉಪನೋಂದಣಿ ಕಚೇರಿಯಲ್ಲಿ ಈತ ರಿಜಿಸ್ಟರ್‌ ಮದುವೆಗೂ ಮುಂದಾಗಿದ್ದು, ಈ ಸಂದರ್ಭದಲ್ಲಿ ಯುವತಿ ಮನೆಮಂದಿ ಆಗಮಿಸಿದ್ದು ಮದುವೆಯಾಗದಂತೆ ತಡೆ ಹಿಡಿದಿದ್ದಾರೆ.

ಇದೀಗ ಈ ಮದುವೆಗೆ ಬ್ರೇಕ್‌ ಬಿದ್ದಿದ್ದು, ಇದೊಂದು ಲವ್‌ ಜಿಹಾದ್‌ ಪ್ರಕರಣವೆಂದು ತನಿಖೆ ನಡೆಸುವಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ.

You may also like