Home » Davanagere: ತನ್ನ ಗ್ರಾಮಕ್ಕೆ ನಡೆದುಕೊಂಡು ಹೋಗುವಾಗ ಪಾಳು ಬಾವಿಗೆ ಬಿದ್ದ ವ್ಯಕ್ತಿ

Davanagere: ತನ್ನ ಗ್ರಾಮಕ್ಕೆ ನಡೆದುಕೊಂಡು ಹೋಗುವಾಗ ಪಾಳು ಬಾವಿಗೆ ಬಿದ್ದ ವ್ಯಕ್ತಿ

0 comments

Davanagere: ತನ್ನ ಗ್ರಾಮಕ್ಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಳು ಬಾವಿಗೆ ವ್ಯಕ್ತಿಯೊಬ್ಬ ಬಿದ್ದಿರುವ ಘಟನೆ ಬುಧವಾರ ರಾತ್ರಿ ದಾವಣಗೆರೆ ತಾಲೂಕಿನ ಜಮ್ಮಾಪುರದಲ್ಲಿ ನಡೆದಿದೆ.

ಕುಮಾರ್‌ ಎಂಬ ಯುವಕ ತನ್ನ ಗ್ರಾಮಕ್ಕೆ ತೆರಳುತ್ತಿರುವಾಗ ಪಕ್ಕದ ಖಾಲಿ ಬಾವಿಗೆ ಬಿದ್ದು ನರಳುತ್ತಿದ್ದರು. ನಂತರ ಮಾಹಿತಿ ದೊರೆತು ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಏಣಿಯ ಸಹಾಯದಿಂದ ಬಾವಿಗೆ ಇಳಿದು ಕುಮಾರ್‌ನ ರಕ್ಷಣೆ ಮಾಡಿದ್ದಾರೆ. ಬಾವಿಗೆ ಬಿದ್ದ ಪರಿಣಾಮ, ಕುಮಾರ್‌ಗೆ ಸೊಂಟ, ಬೆನ್ನುಮೂಳೆಗೆ ಬಲವಾದ ಏಟು ಬಿದ್ದಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

You may also like