Putturu : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ದೈವಗಳ ಕಾರಣಿಕ ನಡೆಯುತ್ತದೆ. ದೇವರಿಗಿಂತಲೂ ಇಲ್ಲಿ ದೈವಗಳ ಆರಾಧನೆ ಹೆಚ್ಚು. ಇಂದಿಗೂ ಇಲ್ಲಿ ನ್ಯಾಯ ಅನ್ಯಾಯಗಳನ್ನು ಅಳೆದು ತೂಗಿ ನೋಡುವುದು ದೈವಗಳೇ. ದೈವಗಳ ಅಪ್ಪಣೆ ಇಲ್ಲದೆ ಇಲ್ಲಿ ನಾನು ಜನ ಒಂದು ಹೆಜ್ಜೆಯನ್ನು ಕೂಡ ಇಡಲಾರರು. ತಪ್ಪು ಮಾಡಿದವರಿಗಂತೂ ದೈವಗಳು ಮುಲಾಜಿಲ್ಲದೆ ಶಿಕ್ಷೆ ವಿಧಿಸುವುದನ್ನು ಕೂಡ ನಾವಿಲ್ಲಿ ಕಾಣಬಹುದು. ಅಂತದ್ದೇ ಒಂದು ಒಂದು ಘಟನೆ ಇದೀಗ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ಪುತ್ತೂರಿನಲ್ಲಿ ವಿಶೇಷ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಅಡಿಕೆ ಕದಿಯಲು ಹೋದವನು ತೋಟದಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಆದರೆ ಇದೀಗ ಈ ಸಾವಿನ ಹಿಂದೆ ದೈವದ ಕಾರ್ಣಿಕ ನಡೆದಿದೆ ಎನ್ನಲಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮತ್ತೆ ದೈವದ ಪವಾಡ ಸಾಬೀತಾಗಿದೆ.
ಏನಿದು ಘಟನೆ?
ಪುತ್ತೂರಿನಲ್ಲಿ ನಿರ್ವಹಣೆ ಇಲ್ಲದ ಅಡಿಕೆ ತೋಟವೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪುತ್ತೂರು ನಗರಸಭಾ ವ್ಯಾಪ್ತಿಯ ಪಾಂಗಳಾಯ ಎಂಬಲ್ಲಿ ಶವವೊಂದು ಪತ್ತೆಯಾಗಿದ್ದು, ಅಡಿಕೆ ಕದಿಯಲು ಬಂದು ಮರದಿಂದ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ವಿಚಿತ್ರ ಅಂದರೆ ಕಳ್ಳ ಅಡಿಕೆ ಮರ ಹತ್ತುತ್ತಿದ್ದಂತೆಯೇ ಮರ ಅರ್ಧದಲ್ಲೇ ಮುರಿದು ಬಿದ್ದಿದೆ. ಈ ವೇಳೆ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದ್ರೆ ಈ ಜಾಗವನ್ನು ಸ್ಥಳೀಯರು ಕಾರಣಿಕದ ಜಾಗ ಅಂತಾನೂ ಕರೆಯುತ್ತಾರೆ. ಏಕೆಂದರೆ ಈ ಸ್ಥಳ ಮೊದಲೇ ಪಾಂಗಳಾಯ ಮೂಡಿತ್ತಾಯ ದೈವಸ್ಥಾನದ ಪರಿಸರದಲ್ಲಿದೆ. ಇದರಿಂದಲೇ ಈತ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಅಲ್ಲದೆ ದೈವದ ಕಾರ್ಣಿಕದಿಂದ ಕದಿಯಲು ಬಂದ ವ್ಯಕ್ತಿ ಅಡಿಕೆ ಮರ ತುಂಡಾಗಿ ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕರು ಹೇಳಿದ್ದಾರೆ.
