Home » Shivamogga: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ

Shivamogga: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ

0 comments

Shivamogga: ರಾಜ್ಯದಲ್ಲಿ ಮಹಿಳೆಯ ಮೇಲೆ ಅಮಾನವೀಯ ಘಟನೆಯೊಂದು ನಡೆದಿದೆ. ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ.

50 ವರ್ಷದ ದಲಿತ ಮಹಿಳೆ ಮೇಲೆ ತೋಟದ ಮಾಲೀಕ ಹಲ್ಲೆ ಮಾಡಿದ್ದು, ಸ್ಥಳೀಯರು ಮಹಿಳೆಯನ್ನು ಶಿಕಾರಿಪುರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ತೋಟದಲ್ಲಿ ಮಹಿಳೆ ಮೇಕೆಗಳನ್ನು ಮೇಯಿಸುತ್ತಿದ್ದಾಲೆ ಎಂದು ಆಕ್ರೋಶಗೊಂಡ ತೋಟದ ಮಾಲೀಕ ರಾಮನಹಳ್ಳಿ ಶಿವಕುಮಾರ್‌ ಎಂಬುವವರ ಮಗ ಅರುಣ್‌ ಮಹಿಳೆಯ ಸೀರೆ ಬಿಚ್ಚಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ನಂತರ ಮರಕ್ಕೆ ಕಟ್ಟಿ ಹಾಕಲು ಯತ್ನ ಮಾಡಿದಾಗ ಮಹಿಳೆ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದಾಳೆ. ಮೇಕೆಗಳು ತೋಟದಲ್ಲಿ ಗಿಡಗಳ ಎಲೆ ತಿಂದಿದ್ದಾವ ಎಂದು ಆರೋಪಿಸಿ ಕೃತ್ಯ ಎಸೆಯಲಾಗಿದೆ.

You may also like